ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅರ್ಶದೀಪ್ ಎಡವಟ್ಟು
ಡೆರಿಲ್ ಮಿಚೆಲ್ಗೆ ಕ್ಷಮೆ ಯಾಚಿಸಿದ ಕ್ಯಾಪ್ಟನ್ ಕ್ರಿಕೆಟ್ ಪಂದ್ಯಗಳು ಆಗುವ ವೇಳೆ ಮೈದಾನಗಳಲ್ಲಿ ಪ್ರತಿನಿತ್ಯ ತಪ್ಪುಗಳು ಆಗುವುದು ಸಾಮಾನ್ಯ. ಆದರೆ ಮಾಡಿರುವ ತಪ್ಪನ್ನು ಅರ್ಥೆಸಿಕೊಂಡು ಕ್ಷಮೆ ಕೇಳುವುದು ದೊಡ್ಡತನ. ಇತ್ತೀಚೆಗೆ ವಿಶ್ವಕಪ್ ಫೈನಲ್ ವೇಳೆ ವೇಗಿ ಅರ್ಶದೀಪ್ ಸಿಂಗ್ ಅವ ನ್ಯೂಜಿಲೆಂಡ್ ತಂಡದ ಬ್ಯಾಟರ್ ಡೆರಿಲ್ ಮಿಚೆಲ್ ಅವರ
ಕಡೆಗೆ ಚೆಂಡೆಸೆದಿದ್ದರು. ಈ ವೇಳೆ ಅವರ ಬಳಿ ವೈಯಕ್ತಿಕವಾಗಿ ಕ್ಷಮೆ ಯಾಚಿಸಿದೆ ಎಂದು ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಬಹಿರಂಗಪಡಿಸಿದ್ದಾರೆ.ಎದುರಾಳಿ ತಂಡದ ಆಟಗಾರನ ವಿರುದ್ಧ ಚೆಂಡು ಎಸೆದು ಐಸಿಸಿ ನಿಮಯ ಉಲ್ಲಂಘಿಸಿದ ಕಾರಣಕ್ಕಾಗಿ ಅರ್ಶದೀಪ್ ಪಂದ್ಯದ ಶುಲ್ಕದಲ್ಲಿ ಶೇಕಡಾ 15ರಷ್ಟು ದಂಡಕ್ಕೆ ಗುರಿಯಾದರು. ಜತೆಗೆ ಒಂದು ಡಿ ಮೆರಿಟ್ ಪಾಯಿಂಟ್ಸ್ಗೂ ಒಳಗಾದರು. ಘಟನೆ ವೇಳೆ ವೇಗಿ ಅರ್ಶದೀಪ್ ಸಿಂಗ್ ಅವರು ಕಿವೀಸ್ ಬ್ಯಾಟರ್ ಡೆರಿಲ್ ಮಿಚೆಲ್ ಬಳಿ ಕ್ಷಮೆ ಯಾಚಿಸಲಿಲ್ಲ. ಉಭಯ ಆಟಗಾರರರ ನಡುವೆ ವಾಗ್ವಾದ ಸಂಭವಿಸುತ್ತಿದ್ದAತೆಯೇ ಮಧ್ಯ ಪ್ರವೇಶಿಸಿದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಆನ್ಫೀಲ್ಡ್ ಅಂಪೈರ್ಗಳು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಇದಕ್ಕಾಗಿ ಐಸಿಸಿಯು ಅರ್ಶದೀಪ್ ಸಿಂಗ್ ಅವರಿಗೆ ಪಂದ್ಯದ ಶೇಕಡಾ 15ರಷ್ಟು ದಂಡ ಜೊತೆಗೆ ಒಂದು ಡಿಮೆರಿಟ್ ಅಂಕವನ್ನೂ ನೀಡಿತು.ಆದರೆ ಪಂದ್ಯ ಮುಗಿದ ಬಳಿಕ ಅರ್ಶದೀಪ್ ಸಿಂಗ್ ಅವರು ಡೆರಿಲ್ ಮಿಚೆಲ್ ಅವರ ಬಳಿ ತೆರಳಿ ಕ್ಷಮೆ ಕೋರಿದರು. ಉಭಯ ಆಟಗಾರರು ಪರಸ್ಪರ ಹಸ್ತಲಾಘವ ಮಾಡಿದರು. ಇದನ್ನು ಗೆಲುವಿನ ಬಳಿಕ ಟಿವಿ ನಿರೂಪಕರು ಕೇಳಿದಾಗ ಅರ್ಶದೀಪ್ ಸಿಂಗ್ ಅವರು ಸಹ ಸ್ಪಷ್ಟಪಡಿಸಿದ್ದರು. “ಈ ವಿಚಾರಕ್ಕಾಗಿ ಮಿಚೆಲ್ ಬಳಿ ನಾನು ಕ್ಷಮೆ ಯಾಚಿಸಲು ಬಯಸುತ್ತೇನೆ. ನನ್ನ ಎಸೆತ ರಿವರ್ಸ್-ಸ್ವಿಂಗ್ ಆಗಿ ಅವನಿಗೆ ಹೊಡೆದಿದೆ. ಆದ್ದರಿಂದ ಅದಕ್ಕಾಗಿ ಅವನಿಗೆ ಕ್ಷಮಿಸಿ ಎಂದು ಹೇಳಲು ಬಯಸಿದ್ದೆ. ಆ ಘಟನೆ ಉದ್ದೇಶಪೂರ್ವಕವಾಗಿ ನಡೆದದ್ದಲ್ಲ,” ಎಂದು ಅವರು ಹೇಳಿದ್ದರು.ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ ಸೂರ್ಯಕುಮಾರ್ ಯಾದವ್ ಅವರು, ಇದೊಂದು ಸಣ್ಣ ಘಟನೆ. ಪಂದ್ಯದ ರೋಚಕ ಘಟ್ಟದಲ್ಲಿ ಇಂತವೆಲ್ಲಾ ನಡೆಯುತ್ತಿರುತ್ತವೆ. ಈ ಬಗ್ಗೆ ನಾನು ನೇರವಾಗಿ ಡೆರಿಲ್ ಮಿಚೆಲ್ ಅವರ ಬಳಿಯೇ ಮಾತನಾಡಿದೆ. ಹಾಗೆಯೇ ವೈಯಕ್ತಿಕವಾಗಿ ಕ್ಷಮೆ ಕೋರಿದೆ. ಅರ್ಶದೀಪ್ ಇದನ್ನ ಉದ್ದೇಶಪೂರ್ವಕವಾಗಿ ಮಾಡಲಿ ಅಥವಾ ಮಾಡದಿರಲಿ, ನೀವು ಅವರನ್ನು ಕ್ಷಮಿಸಿಬಿಡಿ ಎಂದು ಹೇಳಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ಶಾಲೆ ಓದಿನಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ. ಆದರೆ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಮಾತ್ರ ಉತ್ತಮ ಅಂಕ ಗಳಿಸಿದ್ದೇನೆ ಎಂದು ನಗುತ್ತಾ ತಿಳಿಸಿದರು.
ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅರ್ಶದೀಪ್ ಎಡವಟ್ಟು



