This is the title of the web page
This is the title of the web page

50ನೇ ದಿನದ ಸಂಭ್ರಮದಲ್ಲಿ ಆರ್ಟಿಕಲ್ 370

ಕೆ.ಶಂಕರ್ ಅವರ ನಿರ್ದೇಶನದ, ದೇಶಭಕ್ತಿಯ ಕಿಚ್ಚು ಹಚ್ಚುವ ಕಥಾಹಂದರ ಒಳಗೊಂಡ ಚಿತ್ರ ಆರ್ಟಿಕಲ್ 370 ಬಿಡುಗಡೆಯಾದೆಲ್ಲೆಡೆ ಪ್ರೇಕ್ಷಕರು, ಪತ್ರಿಕೆಗಳಿಂದ ಅಪಾರ ಮೆಚ್ಚುಗೆ ಪಡೆದಿತ್ತು. ಇದೀಗ ಆ ಚಿತ್ರ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿ ಮುನ್ನಡೆದಿದೆ. ಸದ್ಯ ಇಪ್ಪತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ಪ್ರದರ್ಶನ ಕಾಣುತ್ತಿದೆ.

ಕಾಶ್ಮೀರಿ ಪಂಡಿತರ ಮೇಲೆ ನಡೆದ ಘೋರ ಹಲ್ಲೆ, ದೌರ್ಜನ್ಯದ ಕಥೆಯನ್ನು ಕಶ್ಮೀರ್ ಫೈಲ್ಸ್ ಚಿತ್ರದಲ್ಲಿ ಹೇಳಲಾಗಿತ್ತು. ಈಗ ಕಾಶ್ಮೀರದಲ್ಲಿ ಅರ್ಟಿಕಲ್ 370 ಜಾರಿಯಾದ ನಂತರ ಏನೆಲ್ಲ ಬದಲಾವಣೆಗಳಾಗಿವೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ.

ಈ ಚಿತ್ರವನ್ನು ಲೈರಾ ಎಂಟರ್ ಪ್ರೈಸಸ್ ಮೂಲಕ ಭರತಗೌಡ ಅವರು ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ಕಾಶ್ಮೀರದಲ್ಲಿ ಹೆಚ್ಚಿನ ಭಾಗದ ಶೂಟಿಂಗ್ ಮಾಡಲಾಗಿದೆ. ಹಿರಿಯ ನಟ ಶಶಿಕುಮಾರ್, ಶೃತಿ, ರಮೇಶ್ ಭಟ್, ಯತಿರಾಜ್, ಡಾ.ದೊಡ್ಡರಂಗೇಗೌಡರು ಹಾಗೂ ಶಿವರಾಮಣ್ಣ ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ.