ಮಹದೇವಪುರ: ಭಾರತೀಯರಿಗೆ ವಿದೇಶದಲ್ಲೂ ಗೌರವ ತರುವ ಕೆಲಸ ಮಾಡಿದ ನರೇಂದ್ರ ಮೋದಿರವರನ್ನು ಮತ್ತೆ ಪ್ರಧಾನಿ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದ್ದು ಯೋಚನೆ ಮಾಡಿ ಮೋದಿಯವರಿಗೆ ಮತ ನೀಡಿ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ಕ್ಷೇತ್ರದ ವೈಟ್ ಫೀಲ್ಡ್ ನಲ್ಲಿ ನಗರ ಮಂಡಲ ಹಾಗೂ ಗ್ರಾಮಾಂತರ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.ಮೋದಿರವರು ದೇಶಕ್ಕಾಗಿ ಸಂಪೂರ್ಣ ಸಮಯ ನೀಡಿದ್ದಾರೆ. ದಿನದ 18 ಗಂಟೆ ಕಾಲದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ, ಮಹದೇವಪುರ ಕ್ಷೇತ್ರದಲ್ಲಿ ಹೂಡಿ ರೈಲ್ವೇಸ್ಟೇಷನ್ ಸೇರಿದಂತೆ ಹಲವು ರೈಲ್ವೆ ಸ್ಟೇಷನ್ ಅಭಿವೃದ್ಧಿ, ರಾಷ್ಟ್ರೀಯ ರಸ್ತೆ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದರು.
ಐದು ಕೆಜಿ ಅಕ್ಕಿ ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ಸಿದ್ದರಾಮಯ್ಯ ನವರು ರಾಜ್ಯ ಸರ್ಕಾರ ನೀಡಿದ್ದು ಎಂದು ಸುಳ್ಳುಹೇಳುತ್ತಿದ್ದಾರೆ ಇವರ ಮಾತಿಗೆ ಕಿವಿ ಕೊಡಬೇಡಿ ಎಂದರು.ಬಡವರಿಗೆ ಕೋವಿಡ್ ಸಂದರ್ಭದಲ್ಲಿ ಫುಡ್ ಕಿಟ್ ನೀಡಿದ್ದೇವೆ, ಮೋದಿಯವರಿಂದ ಪ್ರತಿಯೊಬ್ಬರಿಗೂ ಉಚಿತವಾಗಿ ವ್ಯಾಕ್ಸಿನ್ ಸಿಕ್ಕಿದೆ ಎಂದರು.
ಮಹದೇವಪುರ ಕ್ಷೇತ್ರದಲ್ಲಿ 522 ಬೂತ್ ಗಳಲ್ಲಿ ತಂಡ ಮಾಡಿಕೊಂಡು ಮೋದಿ ಸಾಧನೆ ಹೇಳಿ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡೋಣ ಎಂದರು.
ಅಭಿವೃದ್ಧಿ ಅಂದ್ರೆ ಮೋದಿ, ಕಳೆದ ಬಾರಿ 73 ಸಾವಿರ ಮತ ಲೀಡ್ ಕೊಟ್ಟಿದ್ದೇವೆ ಈ ಬಾರಿ ಇನ್ನು ಹೆಚ್ಚಾಗಬೇಕು ಎಂದು ಹೇಳಿದರು.ಆರ್ ಎಸ್ ಎಸ್ ಸುಧೀರ್ಘ ಹೋರಾಟದಿಂದ ರಾಮಮಂದಿರ ನಿರ್ಮಾಣ ವಾಗಿದೆ, ಸಿದ್ದಾರಾಮಯ್ಯನವರೇ ಓಟಿಗಾಗಿ ಜೈ ಶ್ರೀರಾಮ್ ಅನ್ನೋ ನಾಟಕ ನಡೆಯೋದಿಲ್ಲಎಂದು ಹೇಳಿದರು.
ಬೆಂಗಳೂರು ಕೇಂದ್ರ ಲೋಕಸಭಾ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಮಾತನಾಡಿ, ನರೇಂದ್ರ ಮೋದಿಯವರ ಸಾಧನೆ ಬಹಳಷ್ಟಿದೆ,
ಬಡವರಿಗೆ ಉಚಿತವಾಗಿ ಅಕೌಂಟ್ ಮಾಡಿಸಿ ಲೋನ್ ಸಿಗುವ ರೀತಿ ಮಾಡಿದ್ದಾರೆ, 12 ಕೋಟಿ ಶೌಚಾಲಯ ನಿರ್ಮಿಸಿದ್ದಾರೆ, ಪ್ರತೀ ಹಳ್ಳಿಗೂ ವಿದ್ಯುತ್ ನೀಡಿದ್ದಾರೆ, 75 ಏರ್ಪೋಟ್ ಹೊಸದಾಗಿ ನೀಡಿದ್ದಾರೆ ಆದ್ದರಿಂದ ಪ್ರತಿಯೊಬ್ಬರೂ ಯೋಚನೆ ಮಾಡಿ ದೇಶದ ಭದ್ರತೆಗಾಗಿ ಮತ ನೀಡಿ ಎಂದು ಹೇಳಿದರು.
ಶಾಸಕರಾದ ಮಂಜುಳಾ ಅರವಿಂದ ಲಿಂಬಾವಳಿ, ಸಮಾವೇಶದಲ್ಲಿ ನೆರದಿರುವವರೆಲ್ಲಾ ಒಬ್ಬೊಬ್ಬರೂ ನೂರು ಮತಗಳನ್ನು ಹಾಕಿಸಬೇಕು, ನಮ್ಮ ಮುಖಂಡರು ಶಕ್ತಿ ಪ್ರದರ್ಶನ ಮಾಡಬೇಕು ಎಂದರು.
ರಾಮೇಶ್ವರಂ ಕೇಫೆ ಬಾಂಬ್ ರೀತಿ ಮತ್ತೆ ಘಟನೆಗಳುಮರುಕಳಿಸಬಾರದೆಂದರೆ ಮೋದಿವರು ಮತ್ತೆ ಪ್ರಧಾನಿಯಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ಗೋಪಿನಾಥ್ ರೆಡ್ಡಿ, ಗುರುರಾಜ್, ಮಂಡಲ ಅಧ್ಯಕ್ಷ ಮನೋಹರ್ ರೆಡ್ಡಿ, ಗ್ರಾಮಾಂತರ ಅಧ್ಯಕ್ಷ ನಟರಾಜ್, ಮುಖಂಡರಾದ ಪಾಪಣ್ಣ, ಎಲ್. ರಾಜೇಶ್, ಹೂಡಿ ಪಿಳ್ಳಪ್ಪ, ಮತ್ತಿತರರಿದ್ದರು.