ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಬರ್ತ್ಡೇ ಹಿನ್ನೆಲೆಯಲ್ಲಿ ಸಿಲ್ವರ್ ಜುಬಿಲಿ ಪ್ರದರ್ಶನ ಕಂಡ `ಆಕಾಶ್’ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು.ಅಪ್ಪು ಅಭಿಮಾನಿಗಳು ಮತ್ತೆ ಈ ರೊಮ್ಯಾಂಟಿಕ್ ಲವ್ ಸ್ಟೋರಿ ಕಮ್ ಆಕ್ಷನ್ ಸಿನಿಮಾ ಸಿನಿಮಾವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಥಿಯೇಟರ್ಗೆ ಬಂದು ಸಿನಿಮಾವನ್ನು ನೋಡುತ್ತಿದ್ದಾರೆ. ರಿ-ರಿಲೀಸ್ ಆಗಿರುವ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಮಹೇಶ್ ಬಾಬು ನಿರ್ದೇಶಿಸಿದ ಚೊಚ್ಚಲ ಸಿನಿಮಾ ಥಿಯೇಟರ್ನಲ್ಲಿ 25 ವಾರಗಳ ಕಾಲ ಪ್ರದರ್ಶನ ಕಂಡಿತ್ತು. ಈ ಸಿನಿಮಾವನ್ನು ಪಾರ್ವತಮ್ಮ ರಾಜ್ಕುಮಾರ್ ಅವರೇ ನಿರ್ಮಾಣ ಮಾಡಿದ್ದರು. ಪುನೀತ್ ರಾಜ್ಕುಮಾರ್ ಹಾಗೂ ರಮ್ಯಾ ಕೆಮಿಸ್ಟ್ರಿ ತೆರೆಮೇಲೆ ಮತ್ತೆ ವರ್ಕ್ ಆಗಿತ್ತು. ಇಬ್ಬರ ಅಭಿಮಾನಿಗಳ ಜೊತೆ ಪ್ರೇಕ್ಷಕರು ಖುಷಿ ಪಟ್ಟು ಸಿನಿಮಾ ನೋಡಿದ್ದರು.
ಆರ್ಪಿ ಪಟ್ನಾಯಕ್ ಸಂಗೀತ ಈ ಸಿನಿಮಾದ ಹೈಲೈಟ್ಗಳಲ್ಲಿ ಒಂದಾಗಿತ್ತು. ಜೊತೆಗೆ ಸಿನಿಮಾದ ಕಥೆ ಹಾಗೂ ಪುನೀತ್ ರಾಜ್ಕುಮಾರ್ ಆಕ್ಷನ್ ಸಿನಿಪ್ರಿಯರಿಗೆ ಕಿಕ್ ಕೊಟ್ಟಿತ್ತು. ಈಗ ಅಪ್ಪು 51ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈ ಸಿನಿಮಾ ರಿ-ರಿಲೀಸ್ ಆಗಿದೆ. ಕಳೆದ ಮೂರು ದಿನಗಳಲ್ಲಿ ರಿಲೀಸ್ ಆದ ಬಹುತೇಕ ಕಡೆ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. ಹಾಗಿದ್ದರೆ, ಮೊದಲ ಮೂರು ದಿನಗಳ ಬಾಕ್ಸಾಫೀಸ್ ಕಲೆಕ್ಷನ್ ಹೇಗಿದೆ ತಿಳಿಯುವುದಕ್ಕೆ ಮುಂದೆ ಓದಿ.
3ನೇ ದಿನ ‘ಆಕಾಶ್’ ಕಲೆಕ್ಷನ್
ಪುನೀತ್ ರಾಜ್ಕುಮಾರ್ ಸಿನಿಮಾಗೆ ವೀಕೆಂಡ್ನಲ್ಲಿ, ಅದರಲ್ಲೂ ಭಾನುವಾರ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. 21 ವರ್ಷಗಳ ಬಳಿಕ ರಿ-ರಿಲೀಸ್ ಆಗುತ್ತಿರುವ ಸಿನಿಮಾ ಈ ಲೆವೆಲ್ ಕಲೆಕ್ಷನ್ ಆಗಿದ್ದು ಉತ್ತಮ ಎನ್ನುತ್ತಾರೆ ಟ್ರೇಡ್ ಎಕ್ಸ್ಪರ್ಟ್ಗಳು. ಕರ್ನಾಟಕದ ವಿತರಕರ ವಲಯದಲ್ಲಿ ಓಡಾಡುತ್ತಿರುವ ಅಂಕಿ-ಅಂಶಗಳ ಪ್ರಕಾರ `ಆಕಾಶ್’ ಸಿನಿಮಾ 3ನೇ ದಿನ ಬಾಕ್ಸಾಫೀಸ್ನಲ್ಲಿ ಬರೋಬ್ಬರಿ 50 ಲಕ್ಷ ರೂಪಾಯಿವರೆಗೂ ಕಲೆಕ್ಷನ್ ಆಗಿದೆ ಎನ್ನುತ್ತಿದ್ದಾರೆ.
3 ದಿನಗಳ ಒಟ್ಟು ಕಲೆಕ್ಷನ್ ಎಷ್ಟು? `ಆಕಾಶ್’ ಸಿನಿಮಾ ಬಾಕ್ಸಾಫೀಸ್ನಲ್ಲಿ ಡಿಸೆಂಟ್ ಕಲೆಕ್ಷನ್ ಆಗಿದೆ. ಮೊದಲ ದಿನವೇ ಈ ಸಿನಿಮಾ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಪುನೀತ್ ರಾಜ್ಕುಮಾರ್ ಫ್ಯಾನ್ಸ್ ಥಿಯೇಟರ್ ಮುಂದೆ ಸಂಭ್ರಮ ಮಾಡಿ ಹಬ್ಬವನ್ನೇ ಆಚರಿಸಿದ್ದರು. ಹೀಗಾಗಿ ಫಸ್ಟ್ ಡೇ ಒಳ್ಳೆಯ ಕಲೆಕ್ಷನ್ ಆಗಿದೆ. ಆದರೆ, 2ನೇ ದಿನ ಕಲೆಕ್ಷನ್ ಕೊಂಚ ಮಟ್ಟಿಗೆ ಡ್ರಾಪ್ ಆಗಿತ್ತು. ಆದರೆ, ಮೂರನೇ ದಿನ ಮತ್ತೆ ಪಿಕಪ್ ಆಗಿದೆ.
3 ದಿನಗಳ ಬಾಕ್ಸಾಫೀಸ್ ಕಲೆಕ್ಷನ್ ಹೀಗಿದೆ.
1ನೇ ದಿನ ರೂ.50 ಲಕ್ಷ
2ನೇ ದಿನ ರೂ.25 ಲಕ್ಷ
3ನೇ ದಿನ ರೂ.50 ಲಕ್ಷ
ಒಟ್ಟು ರೂ.1.25 ಕೋಟಿ
ದಿನಗಳಲ್ಲಿ `ಆಕಾಶ್’ ಗಳಿಸಿದ್ದೆಷ್ಟು?



