ತಿರುವಣ್ಣಾಮಲೈ: ಶ್ರೀ ರಮಣ ಭಗವಾನ್ ಅವರು 1879ರಲ್ಲಿ ಮಾರ್ಗಶಿರ ಮಾಸದ ಪುನರ್ವಸು ನಕ್ಷತ್ರದಲ್ಲಿ ತಿರುಸುಳಿ ಗ್ರಾಮದಲ್ಲಿ ಜನಿಸಿದರು. ಭಗವಾನ್ ಶ್ರೀ ರಮಣರ ಆಶ್ರಮವು ತಿರುವಣ್ಣಾಮಲೈ – ಸೆಂಗಂ ರಸ್ತೆಯಲ್ಲಿದೆ.ಪ್ರತಿ ವರ್ಷವೂ ರಮಣಶ್ರೀಯವರ ವರ್ಧಂತ್ಯುತ್ಸವವನ್ನು ಮಾರ್ಗಶಿರ ಮಾಸದ ಪುನರ್ವಸು ನಕ್ಷತ್ರದಂದು ಬಹಳ ಸಡಗರದಿಂದ ಆಚರಿಸಲಾಗುತ್ತದೆ.
ಅದರಂತೆ ಈ ಬಾರಿಯೂ ರಮಣ ಮಹರ್ಷಿಗಳ ಆಶ್ರಮದಲ್ಲಿ 144ನೇ ವರ್ಧಂತ್ಯುತ್ಸವಕ್ಕೆ ಸಡಗರ ಸಂಭ್ರಮದ ಚಾಲನೆ ದೊರೆಯಿತು.
ಇದಕ್ಕೂ ಮುನ್ನ ರಮಣಶ್ರೀ ದೇವರಿಗೆ ಮೊಸರನ್ನ, ಶ್ರೀಗಂಧ, ಪಂಚಾಮೃತ, ಬಣ್ಣ ಬಣ್ಣದ ಹೂವಿನ ಮಾಲೆ ಸೇರಿದಂತೆ ವಿವಿಧ ಸುಗಂಧ ದ್ರವ್ಯಗಳಿಂದ ವಿಶೇಷ ಅಭಿಷೇಕ ನೆರವೇರಿಸಲಾಯಿತು.
ಇದಕ್ಕಾಗಿ ಜಿಲ್ಲೆಯ ಮಾತ್ರವಲ್ಲದೆ ರಾಜ್ಯದ ಮೂಲೆ ಮೂಲೆಗಳಿಂದ ಮತ್ತು ಹೊರ ರಾಜ್ಯಗಳಿಂದ ರಮಣಾಶ್ರಮಂಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ.ಆಧ್ಯಾತ್ಮಿಕ ಭಕ್ತರಿಗಾಗಿ, ಕರ್ನಾಟಕ ರಾಜ್ಯದ ಸುನೀತಾ ತಿಮ್ಮೇಗೌಡ, ತಿಮ್ಮೇಗೌಡ ಮತ್ತು ಅಶೋಕಕುಮಾರ್ ನೇತೃತ್ವದಲ್ಲಿ ರಮಣರ ಆಶ್ರಮದ ಬಳಿ ಅನ್ನದಾನದ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.
ತಿರುಮಲ ತಿರುಪತಿ ದೇವಸ್ಥಾನದ ಮೇಲ್ವಿಚಾರಕ ವೆಂಕಟರಮಣ ರೆಡ್ಡಿ ಅವರು ಡಿಸೆಂಬರ್ 27ರ ಬುಧವಾರದಂದು ಅನ್ನ ಸಂತರ್ಪಣೆಗೆ ಚಾಲನೆ ನೀಡಿದರು.ಕಾಂಚಿಪುರಂ ಇಡ್ಲಿ, ಕೇಸರಿಬಾತ್, ಒಬ್ಬಟ್ಟು, ಉಪ್ಪಿಟ್ಟು ಮತ್ತು ವೆಜಿಟೇಬಲ್ ಬಾತ್ ಅನ್ನು ಪ್ರಸಾದದ ರೂಪದಲ್ಲಿ ರಮಣ ಭಕ್ತರಿಗೆ ಮತ್ತು ಗಿರಿವಲಂಗೆ ಆಗಮಿಸಿದ್ದ ಭಕ್ತರಿಗೆ ವಿತರಿಸಲಾಯಿತು.
ರಮಣ ಮಹರ್ಷಿಗಳ ವರ್ಧಂತ್ಯುತ್ಸವದಲ್ಲಿ ಬೆಳಗ್ಗೆ 6 ಗಂಟೆಯಿಂದ ನಿರಂತರವಾಗಿ 30 ಸಾವಿರಕ್ಕೂ ಹೆಚ್ಚು ಜನರಿಗೆ ಇಡ್ಲಿ, ಪೆÇಂಗಲ್, ಕೇಸರಿ ಬಾತ್, ಬಿಸಿಬೇಳೆ ಬಾತ್, ಮೊಸರನ್ನವನ್ನು ತಯಾರಿಸಿ ಸುನೀತಾ ತಿಮ್ಮೇಗೌಡ ಅವರ ಕುಟುಂಬದವರು ಅನ್ನ ಸಂತರ್ಪಣೆಯನ್ನು ಮುಂದುವರೆಸಿದರು.ರಮಣ ಭಕ್ತರು, ಗಿರಿವಲಂ ಭಕ್ತರು ಉದ್ದನೆಯ ಸರತಿ ಸಾಲಿನಲ್ಲಿ ನಿಂತು ಅನ್ನಸಂತರ್ಪಣೆ ಸ್ವೀಕರಿಸಿ ಕೃತಾರ್ಥರಾದರು.