ಕನಕಪುರ: ಕ್ಷೇತ್ರಕ್ಕೆ ಬರದೆ ಚುನಾವಣೆ ಗೆಲ್ಲುತ್ತೇವೆ ಎಂದುಕೊಂಡು ಓಡಾಡುತ್ತಿದ್ದ ಕಾಂಗ್ರೆಸ್ ನಾಯಕರು ಜೆಡಿಎಸ್ ಬಿಜೆಪಿ ಅಭ್ಯರ್ಥಿ ಘೋಷಣೆಯಾಗುತ್ತಿದ್ದಂತೆ ಸಭೆ ಸಮಾರಂಭಗಳನ್ನು ಮಾಡುತ್ತಿದ್ದಾರೆ ಎಂದು ಜೆಡಿಎಸ್ ಹಿರಿಯ ಮುಖಂಡ ಬಾಲನರಸಿಂಹಯ್ಯ ವ್ಯಂಗ್ಯವಾಡಿದರು.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಅನ್ನಪೂರ್ಣೇಶ್ವರಿ ಕಲ್ಯಾಣಮಂಟಪದಲ್ಲಿ ನಡೆದ ಜೆಡಿಎಸ್ ಮುಖಂಡರು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಜಾತ್ಯತೀತ ಜನತಾದಳದಿಂದ ಯಾರೇ ಅಭ್ಯರ್ಥಿಯಾದ ನಾನು ಈ ಕ್ಷೇತ್ರಕ್ಕೆ ಬಂದು ಚುನಾವಣೆ ಮಾಡದೆ ಗೆಲ್ಲುತ್ತೇನೆ ಎಂದು ಹೇಳಿಕೊಂಡು ಓಡಾಡುತ್ತಿದ್ದ ಕಾಂಗ್ರೆಸ್ ನಾಯಕರು ಬಿಜೆಪಿ ಜೆಡಿಎಸ್ ಅಭ್ಯರ್ಥಿ ಅಖಾಡಕ್ಕಿಳಿತಿದ್ದಂತೆ ವಿರೋಧಿಗಳ ಎದೆಯಲ್ಲಿ ನಡುಕ ಶುರುವಾಗಿದೆ ತಾಲೂಕಿನಲ್ಲಿ ಸಭೆ ಸಮಾರಂಭ ಗಳನ್ನು ಮಾಡ್ತಿದ್ದಾರೆ.
ಯಾರನ್ನು ಆಯ್ಕೆ ಮಾಡಬೇಕು ಎಂಬುದು ಮತದಾರರ ಮೇಲೆ ನಿಂತಿದೆ ಕಳೆದ ಮೂರು ದಶಕಗಳಿಂದ ನಮ್ಮ ಪಕ್ಷದ ಅಭ್ಯರ್ಥಿ ಆಯ್ಕೆಯಾಗಿಲ್ಲ ಆದರೂ ಈ ತಾಲೂಕಿನಲ್ಲಿ ನಿಷ್ಠಾವಂತ ಜೆಡಿಎಸ್ ಅಭಿಮಾನಿಗಳ ಕಾರ್ಯಕರ್ತರ ಮುಖಂಡರ ಬಳಗವೇ ಇದೆ ಇಷ್ಟು ವರ್ಷ ಅಧಿಕಾರ ಇಲ್ಲದಿದ್ದರೂ ಈ ತಾಲೂಕಿನ ಕಾರ್ಯಕರ್ತರು ದಂಡು ದಾಳಿಗೆ ಹೆದರದೆ ಪಕ್ಷ ಉಳಿಸಿ ಕೊಂಡು ಬಂದಿದ್ದಾರೆ ಚುನಾವಣೆ ಸಂದರ್ಭದಲ್ಲಿ ಸ್ವಲ್ಪ ಹೆಚ್ಚಿನ ಶ್ರಮವಹಿಸಿದರೆ ನಮ್ಮ ಅಭ್ಯರ್ಥಿಯನ್ನು ನಾವು ಆಯ್ಕೆ ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ಜೆಡಿಎಸ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಬಿ.ನಾಗರಾಜು ಮಾತನಾಡಿ ಜೆಡಿಎಸ್ ಮುಖಂಡರನ್ನು ಕೊಂಡು ಕೊಂಡಿ ದ್ದೇವೆ ಕಮಿಟ್ಮೆಂಟ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ ಡಿಕೆ ಶಿವಕುಮಾರ್ ಕಳೆದು 25 ವರ್ಷ ಗಳಿಂದ ಅಪಪ್ರಚಾರ ಮಾಡಿಕೊಂಡ ಚುನಾವಣೆ ಗೆಲ್ಲುತ್ತಿದ್ದಾರೆ ನಮ್ಮ ವಿರುದ್ಧ ಅಪಪ್ರಚಾರ ಮಾಡಲೆಂದೇ ಕೆಲವರನ್ನ ಟೀಮ್ ಮಾಡಿಕೊಂಡಿದ್ದಾರೆ ಸಾತನೂರು ಕ್ಷೇತ್ರದಿಂದ ಕನಕಪುರ ಕ್ಷೇತ್ರಕ್ಕೆ ಬಂದಿರುವ ಶಾಸಕ ಶಿವಕುಮಾರ್ ತಾಲೂಕಿನಲ್ಲಿರುವ ಜೆಡಿಎಸ್ ಮುಖಂಡರನ್ನು ಖರೀದಿ ಮಾಡಿದ್ದೇವೆ ಜೆಡಿಎಸ್ ಮುಖಂಡರು ಹೊಂದಾಣಿಕೆ ಮಾಡಿಕೊಂಡು ಪ್ರತಿ ಬಾರಿ ಜೆಡಿಎಸ್ ನಿಂದ ಡಮ್ಮಿ ಅಭ್ಯರ್ಥಿಯನ್ನು ಹಾಕುತ್ತಿದ್ದಾರೆ ಎಂದು ಶಿವಕುಮಾರ್ ಅವರು ಜೆಡಿಎಸ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಪುಟ್ಟರಾಜು ನಲ್ಲಹಳ್ಳಿ ಶಿವಕುಮಾರ್, ಲೋಕೇಶ್, ಸಿದ್ದಮರಿಗೌಡ ಕಬ್ಬಾಳೇಗೌಡ, ರಾಜೇಶ್, ನಗರಸಭಾ ಸದಸ್ಯ ಜಯರಾಮ ಸ್ಟುಡಿಯೋ ಚಂದ್ರು, ವಕೀಲ ನಂಜೇಗೌಡ, ಸರ್ದಾರ್ ಸೇರಿದಂತೆ ಜೆಡಿಎಸ್‍ನ ಕಾರ್ಯಕರ್ತರು, ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
Leave a Review