ಇತ್ತೀಚಿನ ದಿನಗಳಲ್ಲಿ ಒತ್ತಡ ಅನ್ನೋದು ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗವಾಗಿ ಸೇರಿಕೊಂಡಿದೆ. ಅದ್ರಲ್ಲೂ ವಯಸ್ಸಿನ ಆಧಾರದಲ್ಲಿ ಒತ್ತಡ ಕೂಡ ನಮ್ಮೊಂದಿ ಗೆ ಬೆಳೆದು ಬರುತ್ತಿದೆ. ಒತ್ತಡದ ಮುಂದಿನ ಹಂತವೇ ಆತಂಕ ಎಂಬುದಾಗಿದೆ. ಎಲ್ಲಾ ವರ್ಗದ ಮಂದಿಯೂ ಈಗ ಒತ್ತಡ ಹಾಗೂ ಆತಂಕದAತಹ ಸನ್ನಿವೇಶವನ್ನು ಎದುರಿಸುತ್ತೀರಿ. ಹಾಗೆ ಎಲ್ಲಾ ವರ್ಗದ ಮಂದಿ ಇದರಿಂದ ಯಶಸ್ವಿಯಾಗಿ ಹೊರಬರುತ್ತಾರೆ ಎಂದು ಹೇಳಲಾಗದು. ಭಾರತದಲ್ಲಿ ಇತ್ತೀಚಿನ ಅಧ್ಯಯನಗಳು ೧೦.೫ರಷ್ಟು ಭಾರತೀಯರು ರೋಗನಿರ್ಣಯ ಮಾಡಬಹುದಾದ ಮಾನಸಿಕ ಅಸ್ವಸ್ಥತೆಯ ಹೊಂದಿದ್ದಾರೆ ಎಂದು ಅದರಲ್ಲಿ ಬಹುತೇಕರು ಚಿಕಿತ್ಸೆ ಪಡೆಯುವ ಕಡೆ ಗಮನವಿಡುವುದಿಲ್ಲ ಎಂದು ಸಹ ತಿಳಿದುಬಂದಿದೆ. ಅಂದರೆ ಬಹುತೇಕರು ಇದೊಂದು ವೈದ್ಯಕೀಯ ಸಮಸ್ಯೆ ಎಂದು ಪರಿಗಣಿಸುವುದಿಲ್ಲ.
ಮಾನಸಿಕ ಶಾಂತಿಗೆ ೫ ವಿಚಿತ್ರ ಟ್ರಿಕ್ಸ್ ಇನ್ನು ಆತಂಕ ಎಂಬುದು ವ್ಯಕ್ತಿಯೋರ್ವರ ಜೀವನ ಏಳುಬೀಳುಗಳಿಂದ ತುಂಬಲು ಕಾರಣವಾಗುತ್ತದೆ. ಹಲವು ಬಗೆಯ ಆತಂಕಗಳಲ್ಲಿ ನಾವಿಂದು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ಆತಂಕ ಕುರಿತು ತಿಳಿದುಕೊಳ್ಳೋಣ. ಮಕ್ಕಳು ಬೆಳೆದಂತೆಲ್ಲಾ ಅವರಲ್ಲಿ ಆತಂಕ ಕೂಡ ಜೊತೆ ಜೊತೆಗೆ ಬೆಳೆಯಬಹುದು. ಹಂತ ಹಂತವಾಗಿ ಆತಂಕ ಹೆಚ್ಚಾಗುವುದು ಜೀವನ ಶೈಲಿಯಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ.
ಬಾಲ್ಯದಲ್ಲಿ ಕಾಡುವ ಆತಂಕ ದೊಡ್ಡ ಮಟ್ಟದ ಹಾನಿಗೆಕಾರಣಗಾಗುತ್ತದೆ. ಆದರೆ ಕೆಲವರು ಆತಂಕದ ವಿಚಾರವನ್ನು ಬಹಳ ನಿರ್ಲಕ್ಷ÷್ಯ ಮಾಡುವುದು ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಲು ಕಾರಣವಾಗಲಿದೆ. ಭಾರತೀಯ ಮಕ್ಕಳಲ್ಲಿ ಆತಂಕ ಹೆಚ್ಚುತ್ತಿರುವ ಕಳವಳಕಾರಿ ಸಂಗತಿಯಾಗಿದ್ದು, ಪೋಷಕರ ಆತಂಕ, ಅತಿಯಾದ ರಕ್ಷಣೆ, ಸಾಮಾಜಿಕ ಆರ್ಥಿಕ ಸ್ಥಿತಿ ಮತ್ತು ಕುಟುಂಬ ಪರಿಸರದಂತಹ ಅಂಶಗಳಿAದ ಇದು ಪ್ರಭಾವಿತವಾಗಿರುತ್ತದೆ. ಆತಂಕ ನಿರ್ವಹಣೆಯಿಂದ ಹಲವು ಸಮಸ್ಯೆಗಳು ಎದುರಾಗುವುದು ಕೂಡ ನೋಡಬಹುದು. ನಾವು ಕೂಡ ಬಾಲ್ಯದಲ್ಲಿದ್ದಾಗ ದೆವ್ವ ಭೂತ, ರಾಕ್ಷಸರು, ಪ್ರಾಣಿಗಳು, ಪಕ್ಷಿಗಳ ಕುರಿತಾದ ಭಯ ಇರುವುದು ನೆನಪಿರಬಹುದು. ಆದ್ರೆ ಇದೆಲ್ಲವೂ ತಾತ್ಕಾಲಿಕವಾಗಿರಲಿದೆ. ಆದ್ರೆ ಬರುತ್ತಾ ಹಲವರು ನಿದ್ರೆಗಳಿಲ್ಲದ ರಾತ್ರಿಗಳ ಕಳೆದಿರಬಹುದು.
ವಾರಕ್ಕೆ ೩ ಬಾರಿ ಈ ಗಂಜಿ ಕುಡಿಯಿರಿ.. ತೂಕ ಡಬಲ್ ಫಾಸ್ಟ್ ಆಗಿ ಇಳಿಯುತ್ತೆ! ರಕ್ತವೂ ಶುದ್ಧವಾಗುತ್ತೆ Poತಿeಡಿeಜ ಃಥಿ ಅಮೆರಿಕದಲ್ಲಿ ‘ನೋ ಕಿಂಗ್ಸ್’ ಪ್ರತಿಭಟನೆ ಮಾಡ್ತಿದ್ದವರ ಮೇಲೆ ‘ಕಿರೀಟ’ ತೊಟ್ಟು ‘ಕ…ಸ್ಸು’ ಎರಚುತ್ತಿರುವ ಟ್ರಂಪ್ Phoಣo ಅಡಿeಜiಣ: ಂI ಸದ್ಯ ೧೦ ರಿಂದ ೧೮ ವರ್ಷ ವಯಸ್ಸಿನ ನಡುವೆ ಶೇಕಡಾ ೬೪ ರಷ್ಟು ಹದಿಹರೆಯದವರು ದೀರ್ಘಕಾಲದ ಮಾನಸಿಕ ಆರೋಗ್ಯ ಲಕ್ಷಣಗಳನ್ನು ಎದುರಿಸುತ್ತಾರೆ ಎಂದು ಹೇಳಲಾಗಿದೆ. ಅಚ್ಚರಿ ಏನೆಂದರೆ ಇದರಲ್ಲಿ ಯುವತಿಯರ ಸಂಖ್ಯೆ ಅಧಿಕವಿದೆ. ಹದಿಹರೆಯದಲ್ಲಿ ೬೧% ಹುಡುಗರಿಗೆ ಹೋಲಿಸಿದರೆ ೮೪% ಜನರು ಒಮ್ಮೆಯಾದರೂ ಖಿನ್ನತೆ ಅಥವಾ ಆತಂಕವನ್ನು ಅನುಭವಿಸುತ್ತಾರೆ. ಹುಡುಗಿಯರು ದೀರ್ಘಕಾಲದ ರೋಗಲಕ್ಷಣಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ೪೯% ಹುಡುಗರಿಗೆ ಹೋಲಿಸಿದರೆ ೭೨% ಹುಡುಗಿಯರು ಈ ಸಮಸ್ಯೆ ಎದುರಿಸಿದ್ದಾರೆ ಎಂದು ಅಧ್ಯಯನ ಹೇಳುತ್ತದೆ.