ಸಭಾಂಗಣದಲ್ಲಿ ಸಂಸ್ಕöÈತಿ ಸಚಿವಾಲಯ ಭಾರತ ಸರ್ಕಾರದ ಸಹಯೋಗದೊಂದಿಗೆ ನೆಲಸೊಗಡು ಸಾಮಾಜಿಕ ಮತ್ತು ಸಾಂಸ್ಕöÈತಿಕ ಸಂಸ್ಥೆಯು
ಆಯೋಜಿಸಿದ್ದ ೮೦ ಜನ ಜನಪದ ಕಲಾವಿದರುಗಳು ಕಂಸಾಳೆ, ನೃತ್ಯ, ವೀರಗಾಸೆ, ಹಾಲಕ್ಕಿ ಸುಗ್ಗಿ ಕುಣಿತ, ಪಟ್ಟದ ಕುಣಿತ, ಮಾರಿಕುಣಿತ, ಕರಗ ಕುಣಿತ,
ಸೋಮನ ಕುಣಿತ, ಪೂಜಾ ಕುಣಿತ, ಗೊರವರ ಕುಣಿತ ಹೀಗೆ ಹಲವು ಕಲೆಗಳ ಪ್ರದರ್ಶನದ ಸಂಗಮವೇ `ಜನಪದೋತ್ಸವ’ ಕಾರ್ಯಕ್ರಮ. ಉದ್ಘಾಟನೆಯನ್ನು ಫೆಲೋಶಿಪ್ ಅವಾರ್ಡಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಸಂಸ್ಕöÈತಿ ಸಚಿವಾಲಯ ಭಾರತ ಸರ್ಕಾರದ ಡಾ||ಜಿ.ಕೆ.ಅಶ್ವಥ್ ಹರಿದಾಸ್ ರವರು ಇವರು ನೆರವೇರಿಸಿದರು ನೆಲಸೊಗಡು ಸಾಮಾಜಿಕ ಮತ್ತು ಸಾಂಸ್ಕöÈತಿಕ ಸAಸ್ಥೆಯು ಅಳಿವಿನಂಚಿನಲ್ಲಿರುವ ಜನಪದ ಕಲೆಗಳ ಉಳಿವಿಗಾಗಿ ಶ್ರಮಿಸುತ್ತಿರುವ ಕಾರ್ಯವೈಖರಿಯನ್ನು ಶ್ಲಾಘಿಸಿ, ಕಲಾವಿದರು ಪ್ರದರ್ಶಿಸಿದ ಕಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ|| ರಣಜಿತ್, ಆರೋಗ್ಯ ತಜ್ಞರು ಹಾಗೂ ಅಂತರರಾಷ್ಟಿçÃಯ ಶಾಸ್ತಿçÃಯ ಸಂಗೀತ ಗಾಯಕರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಕಲೆ ಹಾಗೂ
ಕಲಾವಿದರುಗಳ ಉಳಿವಿಗೆ ಸಂಸ್ಕöÈತಿ ಸಚಿವಾಲಯ ಭಾರತ ಸರ್ಕಾರವು ಇನ್ನು ಹೆಚ್ಚಿನ ರೀತಿಯ ಅನುದಾನ ನೆರವು ಅತ್ಯಗತ್ಯ ಎಂದು ಹೇಳಿ ಗೀತೆಯೊಂದನ್ನು ಹಾಡಿ ಸಭಿಕರನ್ನ ಮನರಂಜಿಸಿದರು. ಡಾ. ರಾಮಕೃಷ್ಣ ಮುರುಳಿ ಎನ್.ವಿ ಪ್ರಾಂಶುಪಾಲರು ಎ.ಎಸ್.ಸಿ ಕಾಲೇಜು ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ್ದರು.
ಪ್ರೊ.ವಿಶ್ವರಾಧ್ಯ ಕನ್ನಡ ಉಪನ್ಯಾಸಕರು, ಎನ್.ಎಸ್.ಎಸ್. ಕಾರ್ಯಕ್ರಮಾ ಅಧಿಕಾರಿಗಳು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿ ಮತ್ತು
ಗಣ್ಯರೆಲ್ಲರ ಸ್ವಾಗತಿಸಿದರು. ಶ್ರೀ ಲಕ್ಷ÷್ಮಣ ನೆಲಸೊಗಡು, ಸಾಮಾಜಿಕ ಮತ್ತು ಸಾಂಸ್ಕöÈತಿಕ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದ ಸರ್ವರನ್ನೂ ಅಭಿನಂದಿಸಿದರು. ಅಂತರಾಷ್ಟಿçÃಯ ಜನಪದ ಕಲಾವಿದರಾದ ಶ್ರೀ ಗಂಗಣ್ಣ ಬಿಸಿ ಹಾಗೂ ಶ್ರೀ ಕಾರು ಚಿನ್ನ ರವರು ಜನಪದ ಸಂಗೀತವನ್ನು ನೀಡಿ ಪ್ರೇಕ್ಷಕರನ್ನು ರಂಜಿಸಿದರು. ಕಾರ್ಯಕ್ರಮದ ಸಂಚಾಲಕ ಜವಾಬ್ದಾರಿಯನ್ನು ರಂಗಸ್ವಾಮಿ ನಾಯಕ್ ವಹಿಸಿಕೊಂಡಿದ್ದರು.