ಬೆಳಗಾವಿ: ರಾಜ್ಯ ಸರ್ಕಾರ ಬರದ ಬಗ್ಗೆ ನಾವೆಲ್ಲಾ ಕಾತುರತೆಯಿಂದ ಕಾಯ್ತಿದ್ದೆವು ಎಂದು ಹೇಳಿರುವ ಬಿಜೆಪಿಯ ವಿಪಕ್ಷ ನಾಯಕ ಆರ್ ಅಶೋಕ್ ರೈತರ ಸಾಲ ಮನ್ನ ಮಾಡ್ತಾರೆ ಎಂದು ನಿರೀಕ್ಷಿಸಿದ್ದೆವು. ರೈತರ ಬೆಳೆ ಪರಿಹಾರಕ್ಕೆ 25 ಸಾವಿರ ಕೊಡುತ್ತಾರೆ ಎಂದು ಬಾವಿಸಿದ್ದೆವು. ಈ ಬಗ್ಗೆ ಅಧಿವೇಶನದಲ್ಲಿ ಉತ್ತರ ಕೊಡಲಿಲ್ಲ ಎಂದಿದ್ದಾರೆ.
ಅಧಿವೇಶನ ಕರೆದಿರೋದು ಯಾಕೆ ಎಂದ ಪ್ರಶ್ನಿಸಿರುವ ಅವರು, ಉತ್ತರ ಕರ್ನಾಟಕ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಅಲ್ಲ, ಸ್ಟ್ಯಾಂಪ್ ಶುಲ್ಕ ಹೆಚ್ಚಳ ಮಾಡೋಕೆ. ಮನೆಗಳ ತೆರಿಗೆ ಹೆಚ್ಚಳ ಮಾಡೋಕೆ ಕರೆದಿದ್ದಾರೆ. ಇವರ ತೆರಿಗೆ ಹೆಚ್ಚಳ ಮಾಡೋಕೆ ಅಧಿವೇಶನ ಕರೆದಿದ್ದಾರೆ. ರಾಜ್ಯದಲ್ಲಿ ಬರ ಇದೆ, ಪರಿಹಾರ ಅನ್ನೋ ಮಾತೆ ಇಲ್ಲ, ಜನ ಸಂಕಷ್ಟದಲ್ಲಿದ್ದಾರೆ ಎಂದರು.
ಸರ್ಕಾರದ ತೆರಿಗೆ ವಿಧಿಸಿರೋದು, ಭ್ರಷ್ಟಾಚಾರ ಖಂಡಿಸಿ ಹತ್ತು, ಹದಿನೈದು ಸಾವಿರ ಜನ ಸೇರಿಸಿ ಇಂದು ಸಂಜೆ 4.30ಕ್ಕೆ ಪ್ರತಿಭಟನೆ ಮಾಡುತ್ತಿದ್ದೇವೆ.ಇಂದು ಸದನದಲ್ಲಿ ಪ್ರಮುಖ ವಿಚಾರ ಚರ್ಚೆ ಮಾಡ್ತೀವಿ. ಮಹಿಳೆ ವಿವಸ್ತ್ರಗೊಳಿಸಿರೋದು, ಚಿಕ್ಕಮಗಳೂರು ಲಾಯರ್ ಗಲಾಟೆ, ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ, ಕೋಲಾರದಲ್ಲಿ ತಲ್ವಾರ್ ಹಾಕಿರೋದು ಮುಂತಾದ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗುವುದು.
ಪೊಲೀಸರು ರೈತರ ವಿರುದ್ಧ ತೊಡೆ ತಟ್ಟಿರೋದನ್ನ ಯಾರೂ ಕೇಳೋರು ಸರ್ಕಾರದಲ್ಲಿ ಇಲ್ಲ. ಇದನ್ನ ಖಂಡಿಸಿ ಸದನದಲ್ಲಿ ಪ್ರತಿಭಟನೆ ಮಾಡ್ತೀವಿ ಯಾವೆಲ್ಲಾ ನಿಲುವಳಿ ತರಬೇಕು ಅಂತ ಜೆಡಿಎಸ್ ಒಬ್ಬ ಶಾಸಕರನ್ನ ನೀಡಿದೆ. ನಾವೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತೀವಿ ಎಂದರು.