ರಾಮನಗರ: ಕೆರೆ ತುಂಬಿಸುವ ಕಾಯಕದಲ್ಲಿಯಶಸ್ವಿಯಾಗಿರುವ ಲೋಕಸಭಾ ಸದಸ್ಯರಾದ ಡಿ.ಕೆ.ಸುರೇಶ್ ಅವರನ್ನು ಆಧುನಿಕ ಭಗೀರಥ ಎಂದರೆ ತಪ್ಪಾಗಲಾರದು ಎಂದುಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎನ್.ಅಶೋಕ್ (ತಮ್ಮಾಜಿ) ಅಭಿಪ್ರಾಯಪಟ್ಟರು.
ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೂಟಗಲ್ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಿ ಕೂನಮುದ್ದನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡುವ ಮೂಲಕ ಅಧಿಕಾರಿಗಳಿಗೆ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ವಿಶೇಷವಾಗಿ ಕುಡಿಯುವ ನೀರು ಮತ್ತು ಗುರುತ್ವಾಕರ್ಷಣದ ಮೂಲಕ ಕೆರೆಗಳನ್ನು ತುಂಬಿಸುವಂತಹ ದೂರದೃಷಿತ್ವದ ಮಹತ್ವದ ಯೋಜನೆಗಳು ಅನುಷ್ಠಾನಗೊಂಡಿವೆ. ಇದು ಅವರ ಅಭೂತಪೂರ್ವ ಯೋಜನೆ ಎಂದು ಸಂತಸ ವ್ಯಕ್ತಪಡಿಸಿದರು.
ಮಾಗಡಿ ಕ್ಷೇತ್ರದಲ್ಲಿ 3 ಸಾವಿರಕ್ಕೂ ಹೆಚ್ಚು ಟಿಸಿಗಳನ್ನು ಅಳವಡಿಸಲು ಅನುದಾನ ನೀಡಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮನೆಗಳ ಹಂಚಿಕೆ, ಜನ ಸಂಪರ್ಕ ಸಭೆಗಳ ಮೂಲಕ ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನ ಮಾಡುವಲ್ಲಿ ಯಶಸ್ವಿ ಕೆಲಸಗಳನ್ನು ಮಾಡುತ್ತಿದ್ದು, ಅಂತಹ ಸಂಸದರನ್ನು ಆಯ್ಕೆ ಮಾಡಿಕೊಂಡಿರುವ ನಾವುಗಳು ಭಾಗ್ಯವಂತರು ಎಂದು ಸಂಸದರ ಕಾರ್ಯ ವೈಕರಿಯನ್ನು ಬಣ್ಣಿಸಿದರು.
ಕೂಟಗಲ್ ಹೋಬಳಿಯ ಆರು ಗ್ರಾಮ ಪಂಚಾಯಿತಿಗಳ ವಿವಿಧ ಗ್ರಾಮಗಳ ರಸ್ತೆ, ಚರಂಡಿ ಅಭಿವೃದ್ದಿಗೆ ಸುಮಾರು 20 ಕೋಟಿ ರೂ ಅನುದಾನ ಸಿಕ್ಕಿರುವುದು ಸಾಮಾನ್ಯವಾದ ಕೆಲಸವಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕರಾದ ಎಚ್.ಸಿ.ಬಾಲಕೃಷ್ಣ ಅವರುಗಳಲ್ಲಿ ಕ್ಷೇತ್ರವನ್ನು ಅಭಿವೃದ್ದಿ ಪಡಿಸುವ ಬದ್ದತೆ ಇರುವದರಿಂದ ಇಷ್ಟು ಅನುದಾನ ಲಭ್ಯವಾಗಿದೆ. ಪ್ರತಿನಿತ್ಯ ಜನರ ಕಷ್ಟ ಸುಖಗಳನ್ನು ಆಲಿಸಿ ಅವರ ಸಮಸ್ಯೆಗಳನ್ನು ಬಗೆಹರಿಸುವುದರಿಂದ ಅವುಗಳು ಪಕ್ಷದ ತಲೆಕಾಯಲಿವೆ.
ಕೆಲಸ ಮಾಡಿದರೆ ಅದೇ ನಿಜವಾದ ಸಂಘಟನೆಯಾಗಲಿದೆ. ಆ ಕೆಲಸವನ್ನು ಮಾಡಿದಾಗ ರಾಜಕೀಯ ಭಿನ್ನವಾಗಿ ಇಂದು ಜನರು ಪಕ್ಷಾತೀತವಾಗಿ ಕೆಲಸ ಮಾಡಿದವರನ್ನು ಗುರ್ತಿಸುತ್ತಾರೆ. ಆಗೆಯೆ ಮುಂದಿನ ಶಿಕ್ಷಕರ ಕ್ಷೇತ್ರ ಹಾಗೂ ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಜನರು ಬೆಂಬಲಿಸಿ ಆಯ್ಕೆ ಮಾಡಲಿದ್ದಾರೆ ಎಂದರು.
ಬಿಡದಿ-ಕೂಟಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ನಟರಾಜು, ಕೂಟಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ, ಸದಸ್ಯ
ರಾದ ಸುಶೀಲಮ್ಮ, ಗಂಗಾಧರಯ್ಯ, ಮಾಜಿ ಅಧ್ಯಕ್ಷರಾದ ರಾಮಚಂದ್ರಯ್ಯ, ರುದ್ರೇಶ್ ಮುಖಂಡರಾದ ರುದ್ರೇಶ್, ಶಿವರಾಮಯ್ಯ, ಗೌಡಯ್ಯ, ನಂಜಪ್ಪ, ಅರೇಹಳ್ಳಿ ಕೃಷ್ಣಪ್ಪ, ತಿಬ್ಬಯ್ಯ, ಹೇಮಂತ್ಕುಮಾರ್, ಆಂಜನಪ್ಪ ಮತ್ತಿತರರು ಇದ್ದರು.