ಬೆಂಗಳೂರು: ಈ ಹಿಂದೆ ನೀವು ೧೪ ಸಾವಿರ ಕೋಟಿ ರೂಪಾಯಿ ಉಳಿಸಿದ್ದಿರಿ, ನಾವು ಅಧಿಕಾರಕ್ಕೆ ಬಂದ ಮೇಲೆ ಅದನ್ನು ನಾವು ತೀರಸಿದ್ದೆವು. ಸರ್ಕಾರಗಳು ಬದಲಾದಾಗ ಗುತ್ತಿಗೆದಾರರ ಬಿಲ್ ಬಾಕಿಯಿರುತ್ತವೆ ಎಂದು ವಿಧಾನಸಭೆ ವಿಪಕ್ಷ ನಾಯಕ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿಂದು ಗುತ್ತಿಗೆದಾರರ ಬಾಕಿ ಬಿಲ್ ಬಗ್ಗೆ ಪ್ರಸ್ತಾಪಿಸಿ ಮಾತನಾಡಿದ ಅವರು, ಈ ಹಿಂದೆ ನಮ್ಮ ಸರ್ಕಾರದ ವಿರುದ್ಧ ೪೦ ಕಮಿಷನ್ ಆರೋಪ ಮಾಡಿ ನೀವು ೪೦% ಕಮಿಷನ್ ಪೋಸ್ಟರ್ ಹಾಕಿದ್ದೇ ಹಾಕಿದ್ದು, ಯಾವ ಗೋಡೆನೂ ಬಿಡದೆ ಪೋಸ್ಟರ್ ಅಂಟಿಸಿದ್ದೇ ಅಂಟಿಸಿದ್ದು, ಒಂದು ಕಡೆ ಸಿದ್ದರಾಮಯ್ಯ, ಮತ್ತೊಂದೆಡೆ ಡಿ.ಕೆ.ಶಿವಕುಮಾರ್, ಇಬ್ಬರು ಜೋಡೆತ್ತು ಅಂತಿದ್ರು, ಈಗ ಕುಂಟೆತ್ತುಗಳಾಗಿವೆ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಮುಂಡಾ ಹಗರಣದ ಬಗ್ಗೆಯೂ ಅಶೋಕ್ ಪ್ರಸ್ತಾಪ ಮಾಡಿದರು ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಆಕ್ರೋಶ ವ್ಯಕ್ತಪಡಿಸಿ ಮುಡಾ ಮಡಾ ಅಂತ ಪಾದ ಯಾತ್ರೆ ಮಾಡದಿರಿ, ಈಗ ಹೇಳಿ ಏನಾಯ್ತು ಎಂದು ಕಿಡಿಕಾರಿದರು. ಎಲ್ಲಾ ಕೋರ್ಟ್ಗಳಲ್ಲೀ ಈ ಪ್ರಕರಣ ಬಿದ್ದು ಹೋಯ್ತು ಎಂದು ಅಶೋಕ್ಗೆ ಟಾಂಗ್ ಕೊಟ್ಟರು.
ಗುತ್ತಿಗೆದಾರರ ಬಾಕಿ ಬಿಲ್ ಅಶೋಕ್ ತೀವ್ರ ಆಕ್ರೋಶ



