ಬೆಂಗಳೂರು: ಜೈಲಿನಲ್ಲಿ ವಿಡಿಯೋವನ್ನು ಮಾಡುವುದು ನೀವೆ, ರಿಲೀಸ್ ಮಾಡೋದು ನೀವೇ ಎಂದು ಸರ್ಕಾರದ ವಿರುದ್ಧ ವಿರೋಧಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮದ ವಿಡಿಯೋ ವೈರಲ್ ವಿಚಾರವಾಗಿ ಮಾತನಾಡಿದ ಅವರ, ಜೈಲಿನಲ್ಲಿ ಒಳಗೆ ಒಳ್ಳೆ ಸ್ಕೀಮ್ ಮಾಡಿದ್ದಾರೆ. ದರ್ಶನ್ ಸಿಗರೇಟ್ ಸೇದಿದ್ದಕ್ಕೆ ಜಾಮೀನು ರದ್ದು ಮಾಡಿದ್ರಲ್ಲಾ? ಈಗ ನೀವು ಸುಪ್ರೀಂಕೊರ್ಟ್ಗೆ ಹೋಗುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ನಾನು ಯಾರಿಗೂ ಬೆಂಬಲವನ್ನು ಕೊಡುವುದಿಲ್ಲ. ತಪ್ಪು ತಪ್ಪೇ ನಾನು ಯಾರನ್ನೂ ಬಿಡುವುದಿಲ್ಲ ಎಂದಿದ್ದಾರೆ.



