ಬೆಂಗಳೂರು: ಮೃತ್ಯುಕೂಪಗಳಾಗಿರುವ ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಮತ್ತೆರಡು ಜೀವ ಬಲಿಯಾಗಿದೆ. ನಿಮ್ಮ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ÷್ಯ, ಬೇಜವಾಬ್ದಾರಿತನ, ಅಸಾಮರ್ಥ್ಯಕ್ಕೆ ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು ಸ್ವಾಮಿ? ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಟ್ವಿಟ್ ಮಾಡಿರುವ ಅವರು, ಬೆಂಗಳೂರಿನಲ್ಲಿ ಹದಗೆಟ್ಟ ರಸ್ತೆಗಳು ೨೪ ಗಂಟೆಗಳಲ್ಲಿ ಇಬ್ಬರ ಪ್ರಾಣ ತೆಗೆದಿವೆ. ಆಡುಗೋಡಿಯಲ್ಲಿ ಗುಂಡಿಗೆ ಮಹಿಳೆ ಬಲಿಯಾದರೆ, ಕೆ.ಆರ್.ಪುರಂನಲ್ಲಿ ಅರ್ಧಕ್ಕೆ ನಿಂತ ಕಾಮಗಾರಿಯಿಂದ ಎರಡು ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಸಿಟಿ ರೌಂಡ್ಸ್ ಹೆಸರಿನಲ್ಲಿ ಟಿ-ಶರ್ಟು, ಕೂಲಿಂಗ್ ಗ್ಲಾಸು ಹಾಕಿಕೊಂಡು ಲಾಲ್ ಬಾಗ್, ಕಬ್ಬನ್ ಪಾರ್ಕುಗಳಲ್ಲಿ ಪೋಟೋ ಶೂಟ್, ರೀಲ್ಸ್ ಮಾಡಿಬಿಟ್ಟರೆ ಬೆಂಗಳೂರಿನ ರಸ್ತೆಗುಂಡಿ ಸಮಸ್ಯೆ ಸರಿಹೋಗುತ್ತಾ ಡಿ.ಕೆ.ಶಿವಕುಮಾರ್ ಅವರೇ? ಎಂದು ಪ್ರಶ್ನಿಸಿರುವ ಅವರು, ಬ್ರಾ÷್ಯಂಡ್ ಬೆಂಗಳೂರು ಮಾಡುತ್ತೇನೆ ಎಂದು ಬೆಂಗಳೂರನ್ನು ಹಾಳು ಮಾಡಿಬಿಟ್ಟರಲ್ಲ ಸ್ವಾಮಿ. ನಾಚಿಕೆಯಾಗಬೇಕು ನಿಮ್ಮ @Iಓಅಏಚಿಡಿಟಿಚಿಣಚಿಞಚಿ ಸರ್ಕಾರಕ್ಕೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಸ್ತೆ ಗುಂಡಿಗಳಿಗೆ ಇಬ್ಬರು ಬಲಿ ಪ್ರಕರಣ: ಡಿಸಿಎಂ ವಿರುದ್ಧ ಅಶೋಕ್ ವಾಗ್ದಾಳಿ



