ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮಹಿಳಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಶ್ರೀಲಂಕಾದಲ್ಲಿ ನಡೆಯಲಿರುವ ಈ ಬಾರಿಯ ಏಷ್ಯಾಕಪ್ ಜುಲೈ 19 ರಿಂದ ಶುರುವಾಗಲಿದೆ. ಟಿ20 ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯ ಫೈನಲ್ ಪಂದ್ಯವು ಜುಲೈ 28 ರಂದು ನಡೆಯಲಿದೆ. ಎಂಟು ತಂಡಗಳ ನಡುವಣ ಈ ಕದನದ ಮೊದಲ ದಿನವೇ ಭಾರತ ತಂಡ ಕೂಡ ಕಣಕ್ಕಿಳಿಯಲಿದೆ.
ಜುಲೈ 19 ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ನೇಪಾಳ ತಂಡಗಳು ಮುಖಾಮಜಖಿಯಾಗಲಿದೆ. ಇನ್ನು ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಯುಎಇ ತಂಡವನ್ನು ಎದುರಿಸಲಿದೆ. ಹಾಗೆಯೇ ಜುಲೈ 21 ರಂದು ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಸಾಂಪ್ರಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ.
2 ಗ್ರೂಪ್: ಈ ಬಾರಿಯ ಏಷ್ಯಾಕಪ್ನಲ್ಲಿ ಕಣಕ್ಕಿಳಿಯುವ 8 ತಂಡಗಳನ್ನು 2 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಮೊದಲ ಗ್ರೂಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಬಲಿಷ್ಠವಾಗಿ ಕಾಣಿಸಿಕೊಂಡರೆ, ಎರಡನೇ ಗ್ರೂಪ್ನಲ್ಲಿ ಬಾಂಗ್ಲಾದೇಶ್ ಶ್ರೀಲಂಕಾ ತಂಡಗಳಿವೆ.