ಜಕಾರ್ತಾ; ಏಷ್ಯನ್ ಒಲಿಂಪಿಕ್ಸ್ ಕ್ವಾಲಿಫೈಯರ್ಸ್ನಲ್ಲಿ ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಶುಕ್ರವಾರ ಭಾರತದ ಶೂಟರ್ಗಳಾದ ಅಖಿಲ್ ಶೆರಾನ್ ಮತ್ತು ಐಶ್ವರಿ ಪ್ರತಾಪ್ ಸಿಂಗ್ ತೋಮಾರ್ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದಿದ್ದಾರೆ. ಈ ಕೂಟದಲ್ಲಿ ಭಾರತ ಸ್ಪರ್ಧಿಗಳ ಪದಕಗಳ ಬೇಟೆ ಮುಂದುವರಿದಿದೆ.
ಎಂಟು ಪುರುಷರ ಫೈನಲ್ನಲ್ಲಿ ಶೆರಾನ್ 460.2 ಅಂಕ ಗಳಿಸಿ ಜಯಶಾಲಿಯಾದರೆ, ಟೋಕಿಯೊ ಒಲಿಂಪಿಯನ್ ತೋಮಾರ್ 459.0 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರು. ಥಾಯ್ಲೆಂಡ್ನ ಥೊಂಗ್ಫಾಫಮ್ ವೊಂಗ್ಸುಕ್ಡಿ 448.8 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ಶೆರಾನ್ ಮತ್ತು ತೋಮಾರ್ ಜೋಡಿ ಸ್ವಪ್ನಿಲ್ ಕುಸಾಲೆ ಅವರೊಂದಿಗೆ ಸೇರಿಕೊಂಡು ಚೀನಾ ಮತ್ತು ದಕ್ಷಿಣ ಕೊರಿಯಾದ ತಂಡಗಳನ್ನು ಹಿಂದಿಕ್ಕಿ ಇದೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು.