ನೆಲಮಂಗಲ: ತಾಲೂಕು ಸೋಂಪುರ ಹೋಬಳಿಯ ಪೆಮ್ಮನಹಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ತಲೆಯೆತ್ತಿರುವ ಪಕೋರಿಯಸ್ ಬಯೋ ಫರ್ಟಿ ಲೈಸರ್ ಕಂಪನಿ ಮಾಲೀಕನಿಂದ ಗ್ರಾಮದ ಮುಖಂಡ ದಾಸೇಗೌಡ ಎಂಬುವರ ಮೇಲೆ ಹಲ್ಲೆ ಮಾಡಿದ್ದು ಕಂಪನಿ ಸ್ಥಗಿತಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬಹಳ ವರ್ಷಗಳಿಂದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರವಾನಗಿ ಪಡೆಯದೆ ಅನಧಿಕೃತವಾಗಿ ಕಂಪನಿಯಲ್ಲಿ ಕೋಳಿ ತ್ಯಾಜ್ಯ. ಪ್ರಾಣಿಗಳ ತ್ಯಾಜ್ಯ. ಹಾಗೂ ಮಾಂಸದ ತುಂಡುಗಳು ಇತರೆ ತ್ಯಾಜ್ಯದ ವಸ್ತುಗಳ ಶೇಖರಣೆ ಮಾಡಿ, ಅನಧಿಕೃತವಾಗಿ ಪ್ರಾಣಿಗಳ ಆಹಾರ ಪದಾರ್ಥಗಳನ್ನು ತಯಾರಿಸುತ್ತಿದ್ದು, ಈ ಕಂಪನಿಯಲ್ಲಿ ಶೇಖರಣೆ ಮಾಡಿದ ತ್ಯಾಜ್ಯ ವಸ್ತುಗಳಿಂದ ಪೆಮ್ಮನಹಳ್ಳಿ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ರಾತ್ರಿಯ ವೇಳೆ ಕೆಟ್ಟ ದುರ್ವಾಸನೆ ಬರುತ್ತಿದ್ದು.
ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿಂದ ಗ್ರಾಮಸ್ಥರು, ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರನ್ನು ದಾಖಲಿಸಿದ್ದರು. ದೂರು ಆಧಾರದ ಮೇಲೆ ಸ್ಥಳಕ್ಕೆ ಭೇಟಿ ಕೊಟ್ಟ ಅಧಿಕಾರಿಗಳು, ಕಂಪನಿ ಸ್ಥಗಿತಗೊಳಿಸಲು ಮುಂದಾದಾಗ, ಇದರಿಂದ ಆಕ್ರೋಶಗೊಂಡ ಕಂಪನಿಯ ಮಾಲೀಕ ಗ್ರಾಮಸ್ಥರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಹಲ್ಲೆ ಮಾಡಿದ್ದು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ದಾಸೇಗೌಡ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ಕಂಪನಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಪೆÇಲೀಸ್ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಕಂಪನಿ ಸ್ಥಗಿತಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ,