ನೆಲಮಂಗಲ: ಸರಕಾರಿ ಆಸ್ಪತ್ರೆಯಲ್ಲಿ ಅಸಹಾಯಕ ಮಹಿಳೆಯೊಬ್ಬರು ತೊಂದರೆಗೆ ಒಳಗಾಗಿದ್ದಾರೆ. ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ರಾಮನಗರ ಜಿಲ್ಲೆ, ಮಾಗಡಿ ತಾಲೂಕು ತಿಪ್ಪಸಂದ್ರ ಹೋಬಳಿ, ಹುಳ್ಳೇನಹಳ್ಳಿ ಗ್ರಾಮದ ಮಹಿಳೆ ಶಾಂತಕುಮಾರಿ ಮತ್ತು ಮಗನ ಮೇಲೆ ಹಲ್ಲೆ ನಡೆದಿದೆ.
ಶಾಂತಕುಮಾರಿ ಬೆಂಗಳೂರಿನಲ್ಲಿ ವಾಸವಿದ್ದು ತಮ್ಮ ಜಮೀನು ನೋಡಲು ಬಂದಾಗ ಏಕಾಏಕಿ ಅವರ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ, ಶಾಂತಕುಮಾರಿ ಸಂಬಂಧಿಕರು, ಇನ್ನೂ ಘಟನೆ ಹಿನ್ನಲೆ, ಮಹಿಳೆ ನೆಲಮಂಗಲ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ ಇನ್ನು ಕ್ರಮ ಕೈಗೊಂಡಿಲ್ಲ ಎಂದು ಆರೋಪ ವ್ಯಕ್ತವಾಗಿದೆ.
ನೆಲಮಂಗಲ ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಂತಕುಮಾರಿ, ತಂದೆ ತಾಯಿ ಮತ್ತು ಗಂಡ ಇಲ್ಲ ನಾನೊಬ್ಬಂಟಿ ನನಗೆ ನ್ಯಾಯ ಕೊಡಿಸಿ ನನಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಗೋಳಾಡುತ್ತಿರುವ ಶಾಂತಕುಮಾರಿಗೆ ನ್ಯಾಯ ಸಿಗುತ್ತಾ ಕಾದು ನೋಡಬೇಕಾಗಿದೆ.