ಬೆಂಗಳೂರು: ಪರ್ಯಾಯ ಹೂಡಿಕೆ ಕ್ಷೇತ್ರದ ಮುಂಚೂಣಿ ಸಂಸ್ಥೆಯಾದ `ಅಸೆಟ್ ಮಾಂಕ್’ ತನ್ನ ಇತ್ತೀಚಿನ ಹೊಸ ಕೊಡುಗೆಯಾಗಿ `ಎಎಂ ವೈಟ್ ಫೀಲ್ಡ್’ಅನ್ನು ಪ್ರಾರಂಭಿಸಿದೆ. ಇದು ಶರವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರಿನ `ಗ್ರೇಡ್ ಎ’ ವಾಣಿಜ್ಯ ಆಸ್ತಿ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಸಣ್ಣ ಮತ್ತು ಮಧ್ಯಮ ಹೂಡಿಕೆದಾರರಿಗೆ ಸಾಟಿಯಿಲ್ಲದ ಅವಕಾಶವನ್ನು ಒದಗಿಸುತ್ತದೆ.
ವೈಟ್ಫೀಲ್ಡ್ನ ಪ್ರತಿಷ್ಠಿತ `ಬ್ರಿಗೇಡ್ ಟೆಕ್ ಪಾರ್ಕ್’ನಲ್ಲಿರುವ ಈ ಆಸ್ತಿಯನ್ನು ಪ್ರತಿಷ್ಠಿತ `ಬ್ರಿಗೇಡ್ ಗ್ರೂಪ್’ ಅಭಿವೃದ್ಧಿಪಡಿಸಿದ್ದು, ಇದು ಲೀಡ್-ಪ್ರಮಾಣೀಕೃತ (LEED-Certified) ಕಟ್ಟಡವಾಗಿದೆ. ಇದರ 32,300 ಚದರ ಅಡಿ ವಿಸ್ತೀರ್ಣದ ಇಡೀ ಮಹಡಿ ಹಾಗೂ 31 ಬಾಡಿಗೆ ಕಾರ್ ಪಾರ್ಕಿಂಗ್ ಸ್ಥಳಗಳ ಮೇಲೆ ಹೂಡಿಕೆಗೆ ಅವಕಾಶವಿದ್ದು, ಇದರ ಒಟ್ಟು ಮೌಲ್ಯ 31 ಕೋಟಿ ರೂ.ಗಳಾಗಿದೆ. ಪ್ರಸ್ತುತ ಅಮೆರಿಕದ ಪ್ರಮುಖ ಬಹುರಾಷ್ಟ್ರೀಯ ಕಂಪನಿಯೊಂದಕ್ಕೆ ನೀಡಲಾಗಿರುವ ಈ ಆಸ್ತಿಯು ದೀರ್ಘಾವಧಿಯ ಹಾಗೂ ಸ್ಥಿರವಾದ ಬಾಡಿಗೆ ಆದಾಯದ ಹರಿವನ್ನು ಖಾತರಿಪಡಿಸುತ್ತದೆ.
ಹೂಡಿಕೆದಾರರಿಗೆ ತಮ್ಮ ಹೂಡಿಕೆಯ ಮೇಲೆ ಸಿದ್ಧ ಮತ್ತು ವಿಶ್ವಾಸಾರ್ಹ ಆದಾಯವನ್ನು ಒದಗಿಸುತ್ತದೆ.ಹೂಡಿಕೆ ಅವಕಾಶ ಪ್ರಾರಂಭದ ಬಗ್ಗೆ ಮಾತನಾಡಿದ `ಅಸೆಟ್ಮಾಂಕ್’ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೃದ್ವಿ ರೆಡ್ಡಿ ಅವರು, “ನಮ್ಮ ವ್ಯೂಹಾತ್ಮಕ ಮಾರ್ಗಸೂಚಿಯ ಭಾಗವಾಗಿ, ನಾವು ಅಸಾಧಾರಣ ಅವಕಾಶವೊಂದನ್ನು ಪರಿಚಯಿಸುತ್ತಿದ್ದೇವೆ. ಇದು – ಉತ್ಕೃಷ್ಟ ಮೌಲ್ಯದ ಜಾಗ(ಪ್ರೈಮ್ ಲೊಕಾಲಿಟಿ), ಅತ್ಯುತ್ತಮ ಯೋಜನೆ ಹಾಗೂ ಗಣನೀಯ ಲಾಭ ಸೇರಿದಂತೆ ಎಲ್ಲಾ ಅಗತ್ಯ ಮಾನದಂಡಗಳೊಂದಿಗೆ ಹೊಂದಿಕೆಯಾಗುತ್ತದೆಂದು ಖಾತರಿಪಡಿಸುತ್ತೇವೆ.
ಪ್ರಸ್ತುತ ಮಾರುಕಟ್ಟೆ ಮೌಲ್ಯಕ್ಕಿಂತ ರಿಯಾಯಿತಿ ದರದಲ್ಲಿ ಆಸ್ತಿಯನ್ನು ಒದಗಿಸಲಾಗಿದ್ದು, ಇದು ಹೂಡಿಕೆ ಅವಧಿಯ ಅಂತ್ಯದ ವೇಳೆಗೆ ಮೌಲ್ಯ ಏರಿಕೆಯ ಭರವಸೆ ಒದಗಿಸುತ್ತದೆ ಎಂದು ಹೇಳಿದರು.`ಎಎಂ ವೈಟ್ಫೀಲ್ಡ್’, ಹೂಡಿಕೆದಾರರಿಗೆ ಸದೃಢ ಹೂಡಿಕೆ ಅವಕಾಶವನ್ನು ಒದಗಿಸುತ್ತದೆ. ಇದು 16% `ಐಆರ್ಆರ್’, 8.50% ಆರಂಭಿಕ ಬಾಡಿಗೆ ಲಾಭ ಮತ್ತು 4-6 ವರ್ಷಗಳಲ್ಲಿ ಸಾಧಿಸಬಹುದಾದ 1.8% ಬಂಡವಾಳ ದ್ವಿಗುಣ ಗುರಿಯನ್ನು ಒಳಗೊಂಡಿದೆ.
ತಂತ್ರಜ್ಞಾನ ಪರಿಸರಕ್ಕೆ ಹೆಸರಾದ `ವೈಟ್ ಫೀಲ್ಡ್ನ `ಗ್ರೇಡ್ ಎ’ ಜಾಗದಲ್ಲಿ ಬೆಳೆಯು ತ್ತಿರುವ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇದೊಂದು ಅತ್ಯುತ್ತಮ ಅವಕಾಶವಾಗಿದೆ. ನಗರದ ವಿವಿಧ ಭಾಗಗಳಿಗೆ ಸಂಪರ್ಕ ಜಾಲ ವಿಸ್ತರಣೆ ಹಾಗೂ ಸಣ್ಣ ಮತ್ತು ಮಧ್ಯಮ ವ್ಯಾಪಾರ, ಆತಿಥ್ಯ ಮತ್ತು ಟೆಕ್ ಬ್ರಾಂಡ್ಗಳು ವೈಟ್ಫೀಲ್ಡ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದು, ಇದು ಈ ಜಾಗದಲ್ಲಿನ ಹೂಡಿಕೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಬಿಲ್ಡರ್ಗಳ ಪ್ರವೇಶ ಮತ್ತು ಸ್ಥಾಪಿತ ವಾಣಿಜ್ಯ ಐಟಿ ಕಚೇರಿ ಸ್ಥಳವಾಗಿ ವಿಕಸನಗೊಳ್ಳುತ್ತಿರುವುದು ವೈಟ್ಫೀಲ್ಡ್ನಲ್ಲಿ ಹೂಡಿಕೆ ಸಾಮರ್ಥ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಈ ಕ್ರಿಯಾತ್ಮಕ ಮಾರುಕಟ್ಟೆಯಲ್ಲಿ ಬೆಳವಣಿಗೆಯನ್ನು ಬಯಸುವವರಿಗೆ ಈ ಹೂಡಿಕೆಯು ಅತ್ಯಂತ ಯೋಜಿತ ನಿರ್ಣಯವೆನಿಸಲಿದೆ.