ಬೆಂಗಳೂರು: ಕಾರ್ಯಾಗಾರಗಳ ಮೂಲಕ, ಕಲೆ ಮತ್ತು ಕ್ರಾಫ್ಟ್ನಲ್ಲಿ ಹೊಸ ಪರಿಕಲ್ಪನೆಗಳು ಮತ್ತು ತಂತ್ರಗಳನ್ನು ಕಲಿಯಲು ವಿದ್ಯಾರ್ಥಿಗಳಿಗೆ ಅವಕಾಶವಾಗುತ್ತದೆ ಎಂದು ಯುವಾ ಮುಖ್ಯ ಕಾರ್ಯತಂತ್ರ ಅಧಿಕಾರಿ ಅಭಿಜಿತ್ ಸನ್ಯಾಲ್, ಯುವ ಸಂಸ್ಥೆಯ ಧ್ಯೇಯದ ಬಗ್ಗೆ ಮಾತನಾಡಿದರು.
ನವನೀತ್ ಎಜುಕೇಶನ್ ಅಡಿಯಲ್ಲಿ ಯುವಾ ಸ್ಟೇಷನರಿ ಇತ್ತೀಚೆಗೆ ಜನವರಿ 16 ರಿಂದ 18 ರ ವರೆಗೆ ಬೆಂಗಳೂರಿನಲ್ಲಿ ಕಲಾ ಕಾರ್ಯಾಗಾರಗಳ ಸರಣಿಯನ್ನು ನಡೆಸಿಕೊಟ್ಟಿದೆ. ವಿಲ್ ಇಂಡಿಯಾ ಚೇಂಜ್ ಫೌಂಡೇಶನ್ನ ಎನ್ಜಿಒ ಸಹಭಾಗಿತ್ವದಲ್ಲಿ ನಡೆಸಿದ ಕಾರ್ಯಾಗಾರವು `ವಸುಧೈವ ಕುಟುಂಬಕಂ’ ಎಂಬ ತತ್ವವನ್ನು ಆಧರಿಸಿತ್ತು. ಯುವ ಪ್ರತಿಭೆಗಳಲ್ಲಿ `ಏಕ ವಿಶ್ವ, ಏಕ ಕುಟುಂಬ’ ಎಂಬ ಪರಿಕಲ್ಪನೆಯನ್ನು ಮೂಡಿಸುವುದಕ್ಕೆ ಈ ಪರಿಕಲ್ಪನೆಯನ್ನು ರೂಪಿಸಲಾಗಿತ್ತು.
ಗಣಪತಿ ಎಸ್ ಹೆಗಡೆ ಅವರ ಮಾರ್ಗದರ್ಶನದಲ್ಲಿ ಬೆಂಗಳೂರು ನಗರದಲ್ಲಿ ಐದು ಆಕರ್ಷಕ ಕಾರ್ಯಾಗಾರಗಳನ್ನು ನಡೆಸಲಾಗಿತ್ತು ಮತ್ತು ಸುಮಾರು 2300 ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಜನಪ್ರಿಯ ಸಂಸ್ಥೆಗಳಾದ ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಇನ್ನಿತರ ಶಾಲೆಗಳು ಈ ಕಾರ್ಯಕ್ರಮಕ್ಕೆ ಸಹಭಾಗಿತ್ವ ನೀಡಿದ್ದವು.
ಯುವಾ ಹಿರಿಯ ಬ್ರ್ಯಾಂಡ್ ಮ್ಯಾನೇಜರ್ ಅಮರ್ ಕುಲಕರ್ಣಿ ಅವರು, ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಸಿಕ್ಕರೆ ಅವರು ತಮ್ಮ ಕಲ್ಪನೆಗೆ ಹೊಸ ರೂಪ ನೀಡಬಲ್ಲರು. ಈ ಕಾರ್ಯಾಗಾರವು ಕಲಾತ್ಮಕ ಪ್ರತಿಭೆಯನ್ನು ಪ್ರದರ್ಶಿಸಿದ್ದಷ್ಟೇ ಅಲ್ಲ, ಮಕ್ಕಳಲ್ಲಿ ಒಗ್ಗಟ್ಟಿನ ಭಾವವನ್ನೂ ಇದು ಪೋಷಿಸಿದೆ. ಉನ್ನತ ಗುಣಮಟ್ಟದ ಕಲಾತ್ಮಕ ಪ್ರತಿಭೆಯನ್ನು ಪ್ರದರ್ಶಿಸಿದಂತೆಯೇ, ತಮ್ಮ ಅಭಿವ್ಯಕ್ತಿಗಾಗಿ ಮತ್ತು ಮಾನವೀಯತೆಯನ್ನು ಅನಾವರಣಗಳಿಸಲು ಯುವಕರಿಗೆ ಹೊಸ ವೇದಿಕೆಯನ್ನು ಒದಗಿಸಿದೆ ಎಂದರು.