ಹೊಸಕೋಟೆ: ಏಪ್ರಿಲ್ 26ರಂದು ನಡೆಯಲಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಹೊಸಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಕಿಶನ್ ಕಲಾಲ್ ತಿಳಿಸಿದರು.
ನಗರದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಚುನಾವಣೆ ಕುರಿತು ಆಯೋಜಿಸಿದ್ದ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಹೊಸಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 293 ಮತಗಟ್ಟೆಗಳಿದ್ದು ಗ್ರಾಮೀಣ ಪ್ರದೇಶದಲ್ಲಿ 244, ನಗರ ಪ್ರದೇಶಗಳಲ್ಲಿ 49 ಮತಗಟ್ಟೆಗಳನ್ನ ಹೊಂದಿದೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,17,821 ಪುರುಷ ಮತದಾರರು, 1,19,687 ಮಹಿಳಾ ಮತದಾರರು, ಇತರೆ 21 ಮತದಾರರು ಸೇರಿದಂತೆ ಒಟ್ಟು 237529 ಮತದಾರರಿದ್ದಾರೆ.
ಇದರಲ್ಲಿ ಗ್ರಾಮೀಣ ಪ್ರದೇಶದಲ್ಲಿ 90,855 ಪುರುಷÀರು, 92,338 ಮಹಿಳಾ ಮತದಾರರು, 21 ಇತರೆ ಮತದಾರರಿದ್ದಾರೆ. ನಗರ ಪ್ರದೇಶದಲ್ಲಿ 26,966 ಪುರುಷರು, 27,349 ಮಹಿಳಾ ಮತದಾರಿದ್ದಾರೆ. ಈ ಬಾರಿ 6,710 ಯುವ ಮತದಾರರಿದ್ದು ಇವರಲ್ಲಿ 3,652 ಪುರುಷರು, 3,058 ಮಹಿಳಾ ಮತದಾರರು ಒಳಗೊಂಡಿದ್ದಾರೆ ಎಂದರು.
ಹಾಗೆಯೇ 85 ವರ್ಷಕ್ಕಿಂತ ಮೇಲ್ಪಟ್ಟ 2,396 ಮತದಾರರಿದ್ದು ಇವರಲ್ಲಿ 1,138 ಪುಷರು, 1,258 ಮಹಿಳಾ ಮತದಾರರಿದ್ದಾರೆ. ಇವರುಗಳಿಗೆ ಚುಣಾವಣಾ ಆಯೋಗದ ನಿರ್ದೇಶನದಂತೆ ಇಚ್ಛೆಪಟ್ಟಲ್ಲಿ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಈ ಬಗ್ಗೆ ಸಂಬಂಧಪಟ್ಟ ಮತಕೇಂದ್ರದ ಅಧಿಕಾರಿಗಳು ಪ್ರತಿ ಮನೆಗೂ ಭೇಟಿ ನೀಡಿ ಪರಿಶೀಲಿಸಿ ನೋಂದಾಯಿಸಲು ಸೂಚಿಸಲಾಗಿದೆ. ಈ ಬಗ್ಗೆ ಯಾವುದೇ ರೀತಿಯ ದೂರುಗಳು ಬರದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.
ಚುನಾವಣೆ ಸಂಬಂಧವಾಗಿ ಮಾದರಿ ನೀತಿಸಂಹಿತೆ ಉಲ್ಲಂಘನೆಯಂತಹ ಯಾವುದೇ ರೀತಿಯ ಅಕ್ರಮಗಳು ಕಂಡುಬಂದಲ್ಲಿ ಸಾರ್ವಜನಿಕರು ಹೊಸಕೋಟೆ ವಿಧಾನಸಭಾ ಕ್ಷೇತ್ರದ ನಿಯಂತ್ರಣಾ ಕೊಠಡಿಯನ್ನು ಸ್ಥಾಪಿಸಿದ್ದು ದೂರವಾಣಿ ಸಂಖ್ಯೆ (080) 27931237, ಬೆಂಗಳೂರು ಗ್ರಾಮಾಂತರ ನಿಯಂತ್ರಣಾ ಕೊಠಡಿ ದೂ. (080) 29902025ನ್ನು ಸಂಪರ್ಕಿಸಿ ದೂರು ಸಲ್ಲಿಸಬಹುದಾಗಿದೆ ಎಂದರು.
ಚುನಾವಣೆ ಸಂದರ್ಭದಲ್ಲಿ ಅಕ್ರಮ ತಡೆಗಟ್ಟುವ ದೃಷ್ಟಿಯಿಂದ ಹೊಸಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸೂಲಿಬೆಲೆ, ಬೆಂಡಿಗನಹಳ್ಳಿ, ಹಿಂಡಿಗನಾಳ, ರಾಮಸಂದ್ರ ಗೇಟ್, ಕಟ್ಟಿಗೇನಹಳ್ಳಿ, ಬಾಗೂರು, ಹೊಸಕೋಟೆ ಟೋಲ್ ಪ್ಲಾಜಾ ಬಳಿ ಒಟ್ಟು ಏಳು ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲಾಗಿದ್ದು 24ಷ7 ಕಾರ್ಯನಿರ್ವಹಿಸಲು ಅಗತ್ಯ ಸಿಬ್ಬಂದಿಯನ್ನು ಸಹ ನಿರ್ವಹಿಸಳಾಗಿದೆ.
ಪ್ರತಿ ಚೆಕ್ ಪೋಸ್ಟ್ನಲ್ಲಿ ವಿವಿಧ ಇಲಾಖೆಗಳ ಮೂವರು ಸಿಬ್ಬಂದಿಗಳು ಕರ್ತವ್ಯ ನಿರ್ವಹಣೆ ಮಾಡಲಿದ್ದಾರೆ. ಅಷ್ಟೇ ಅಲ್ಲದೆ ತಾಲೂಕಿನಲ್ಲಿ ಸೂಲಿಬೆಲೆ, ನಂದಗುಡಿ, ಜಡಗೇನಹಳ್ಳಿ, ಕಸಬಾ, ಅನುಗೊಂಡನಹಳ್ಳಿ ಹೋಬಳಿ ಮತ್ತು ಹೊಸಕೋಟೆ ನಗರಕ್ಕೆ ಒಟ್ಟು ಆರು ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ರಚಿಸಲಾಗಿದ್ದು ಪ್ರತಿ ತಂಡದಲ್ಲಿ ಮೂವರು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದರು.ತಹಶೀಲ್ದಾರ್ ವಿಜಯಕುಮಾರ್, ಚುನಾವಣಾ ವಿಭಾಗದ ಅಧಿಕಾರಿ ಲಕ್ಷ್ಮೀನಾರಾಯಣ್ ಉಪಸ್ಥಿತರಿದ್ದರು.