ಬೆಂಗಳೂರು: ಇಂದು ಮುಂಜಾನೆ ಸುಮಾರು ಮೂರು ಗಂಟೆ ಸಮಯಕ್ಕೆ ಎಟಿಎಂ ದರೋಡೆ ನಡೆಸಲು ವಿಫಲವಾಗಿ ಆರೋಪಿಗಳು ಪರಾರಿಯಾಗಿರುವ ಘಟನೆ ಅವಲಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವೀರಗೊಂಡನಹಳ್ಳಿಯಲ್ಲಿರುವ ಯೂನಿಯನ್ ಬ್ಯಾಂಕಿಗೆ ದರೋಡೆ ನಡೆಸಲು ಸಜ್ಜಾಗಿದ್ದ ಸಮಯಕ್ಕೆ ಸರಿಯಾಗಿ ಬೀಟ್ ಪೊಲೀಸರು ಬಂದ ಕಾರಣ ಪೊಲೀಸರನ್ನು ನೋಡಿ ಪರಾರಿಯಾಗಿರುತ್ತಾರೆ.
ಅವಲಳ್ಳಿ ಪೊಲೀಸರು ತಕ್ಷಣ ನಾಕಾ ಬಂದಿ ಶುರು ಮಾಡಿ ಪತ್ತೆ ಮಾಡಲು ಪ್ರಯತ್ನಿಸುತ್ತಾರೆ, ಆದರೆ ಆರೋಪಿಗಳು ಪರಾರಿಯಾಗಿರುತ್ತಾರೆ. ಅವಲಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ತನಿಖೆ ಕೈಗೊಂಡಿರುತ್ತಾರೆ.