ಶುದ್ಧ್ದತೆಯು ಯೋಗದಿಂದ ನಡೆದಾಗ ಆತ್ಮಜ್ಞಾನ ಭೋಗಕ್ಕೆ ಸೀಮಿತವಾದರೆ ವಿಜ್ಞಾನ. ವಿಜ್ಞಾನ ಎಂದರೆ ವಿಶೇಷ ಜ್ಞಾನ.ಇದರಲ್ಲಿ ಆಧ್ಯಾತ್ಮ ಮತ್ತು ಭೌತಿಕವೆರಡೂ ಸೇರುವ ಸಾಮಾನ್ಯ ಜ್ಞಾನದಿಂದ ಮಾನವನ ಸ್ಥಿತಿಗತಿ ನಿಂತಿದೆ.
ಎಲ್ಲರೂ ಮಾಡೋದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಇರೋದನ್ನು ಹೊಟ್ಟೆ ಬಟ್ಟೆಗಿದ್ದರೂ ತಿನ್ನಲು ಉಡಲು ಮನಸ್ಸಿಲ್ಲದವರು ಹೆಚ್ಚಾಗಿರೋದಕ್ಕೆ ಕಾರಣವೇ ಅತಿಯಾದ ವೈಜ್ಞಾನಿಕ ಚಿಂತನೆ ಎಂದರೆ ತಪ್ಪಾಗದು.
ಎಷ್ಟು ಹೊರಗೆ ತಿರುಗಿದರೂ ಹಿಂದಿರುಗಿ ಮೂಲ ಸೇರೋವರೆಗೂ ಆತ್ಮಕ್ಕೆ ತೃಪ್ತಿ ಮುಕ್ತಿ ಸಿಗದೆನ್ನುವುದಷ್ಟೆ ಆಧ್ಯಾತ್ಮ ಸತ್ಯ. ಹಾಗಾದರೆ ತಿರುಗೋದು ತಪ್ಪೆ ಎಂದರೆ ತಪ್ಪಲ್ಲ ಎಲ್ಲಿ ತಿರುಗಬೇಕು ಯಾಕೆ ಎಷ್ಟು ಯಾವಾಗ ತಿರುಗಿ ಬರಬೇಕೆನ್ನುವ ಅರಿವಿದ್ದರೆ ಸರಿ. ಜೀವನವೇ ಒಂದು ಅಲೆದಾಟ.ಆ ಅಲೆದಾಟದಲ್ಲಿ ಅಲೆಮಾರಿಗಳೇ ಹೆಚ್ಚಾದರೆ ಮಾರಿಯ ಕಾಟ ತಪ್ಪಲ್ಲ.ಅಂದರೆ ರೋಗವಾಗಿರುತ್ತದೆ.
ಇದಕ್ಕೆ ಕಾರಣ ಅತೃಪ್ತ ಮನಸ್ಸು. ಮನಸ್ಸನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವುದಕ್ಕಾಗಿ ಯೋಗಿ ಆಗಬೇಕು ಎಂದು ಶ್ರೀ ಕೃಷ್ಣ ನ ಭಗವದ್ಗೀತೆ ಸಂದೇಶವಾಗಿತ್ತು. ಗೀತೆಯು ಯೋಗ ಮಾರ್ಗ ತಿಳಿಸಿತ್ತು. ಅದರಲ್ಲಿ ಜ್ಞಾನಯೋಗ- ನಮ್ಮೊಳಗೆ ಅಡಗಿರುವ ವಿಶೇಷವಾದ ಜ್ಞಾನದೆಡೆಗೆ ಸ್ವತಂತ್ರ ವಾಗಿ ನಡೆಯೋ ಶಿಕ್ಷಣ ಅಗತ್ಯವಿತ್ತು. ಅದೀಗ ಹೊರಗಿನ ಜ್ಞಾನದೆಡೆಗೆ ನೇರವಾಗಿ ಹೊರಟಿದೆ.
ರಾಜಯೋಗ- ರಾಜಕೀಯದಲ್ಲಿ ಸೇರೋದನ್ನು ರಾಜಯೋಗ ಎನ್ನಲಾಗದು. ರಾಜಕೀಯ ಅನ್ಯರನ್ನು ಆಳುತ್ತದೆ ಆದರೆ ತನ್ನ ತಾನು ಆಳಿಕೊಳ್ಳುವುದೇ ರಾಜಯೋಗ.ಇಂದಿನ ಪ್ರಜಾಪ್ರಭುತ್ವದ. ಪ್ರಜೆಗಳಿಗೆ ತಾನು ಭಾರತದೊಳಗಿದ್ದೆನೆನ್ನುವ ಸಾಮಾನ್ಯ ಜ್ಞಾನವೂ ಕುಸಿಯುತ್ತಾ ಹೊರದೇಶದವರೆಗೂ ಹೋಗಿ ದಿಡಿಯುವ ಪರಿಸ್ಥಿತಿ ಬಂದಿದೆ ಎಂದರೆ ಇಲ್ಲಿ ರಾಜರು ಯಾರು? ದೇಶ ಸೇವೆ ಸ್ವಂತ ಬುದ್ದಿ ಜ್ಞಾನದಿಂದ. ನಡೆದಾಗ ಯೋಗವೆನಿಸುತ್ತದೆ.
ಭಕ್ತಿಯೋಗ- ಭಕ್ತಿ ಎನ್ನುವುದು ಯಾರೋ ಹೊರಗಿನವರಿಂದ ಸಿಗದು. ದೈವಭಕ್ತಿ ದೇಶಭಕ್ತಿ ಆಂತರಿಕ ಶಕ್ತಿಯಾಗಿದ್ದು ಇದು ಆಧ್ಯಾತ್ಮಿಕ ಉನ್ನತಿಗೆ ಕಾರಣವಾಗಿದೆ. ದೇವರನ್ನು ಹೊರಗೆಳೆದು ಆಳೋದರಿಂದ ಸಿಗದು. ಪ್ರತಿಯೊಬ್ಬರೂ ದೇವರ ದಾಸರಾಗಲು ಕಷ್ಟ ಆದರೆ ಎಲ್ಲರಲ್ಲಿಯೂ ದೈವತ್ವ ಇದೆ. ಇದಕ್ಕೆ ಪೂರಕವಾದ ಗುರು ಶಿಕ್ಷಣ ಸಹಕಾರ ಸಿಕ್ಕರೆ ಭಕ್ತರು ಬೆಳೆಯುವರು. ನಾಟಕವಾಡಿಕೊಂಡು,ನಾಟಕ ನೋಡಿಕೊಂಡು ಭಕ್ತರಾಗಲಾರರು.
ಕರ್ಮ ಯೋಗ- ಕಲಿಯುಗದಲ್ಲಿ ಕರ್ಮ ಯೋಗವೇ ಮುಖ್ಯ ವಾಗಿರುತ್ತದೆ.ಅವರವರ ಕರ್ಮಕ್ಕೆ ತಕ್ಕಂತೆ ಜನ್ಮ. ಜನ್ಮ ಯಾವ ದೇಶ ಕಾಲ ಸ್ಥಳ, ಧರ್ಮ ಜಾತಿಯೊಳಗೆ ಆಗಿದೆಯೋ ಅದರ ಋಣ ಅಥವಾ ಸಾಲ ತೀರಿಸುವ ಕೆಲಸ ಅಂದರೆ ಕರ್ಮ ಮಾಡಿದರೆ ಆತ್ಮಕ್ಕೆ ತೃಪ್ತಿ. ಆದರೆ ಇಂದು ದೃಷ್ಟಿ ಕೋನ ಬದಲಾಗಿ ನಿಜವಾದ ಜ್ಞಾನವುಳ್ಳ ಶ್ರಮ ಜೀವಿಗಳನ್ನು ಬಡವರೆಂದು ಪರಿಗಣಿಸಿ ಸಾಲದೆಡೆಗೆನಡೆಸಿ ಹೊರಗಿನವರ ದಾಸರಾಗಿಸಿದರೆ ಪ್ರಗತಿ ಎನ್ನುವ ಹಂತಕ್ಕೆ ಮನುಕುಲ ಬಂದಿದೆ. ಇದರಿಂದಾಗಿ ತಮ್ಮ ಮೂಲದ ಧರ್ಮ ಕರ್ಮಕ್ಕೆ ಚ್ಯುತಿ ಬಂದಾಗ ಪರಮಾತ್ಮನ ದರ್ಶನ ಆಗದೆ ಎಷ್ಡು ಇದ್ದರೂ ಸಾಲದು.ಸಾಲವೇ ಅದಾಗಿದೆ. ಸಾಲವೇ ಶೂಲ ಯಾವುದಿದರಮೂಲ ಎಂದರೆ ಸರ್ಕಾರ ಸಹಕಾರ ಎಂದಾಗಬಹುದು.
ಅಗತ್ಯಕ್ಕಿಂತ ಮೀರಿ ಸಾಲ ಮಾಡಿದರೆ ತೀರಿಸಲಾಗದೆ ಅಡ್ಡದಾರಿ ಹಿಡಿಯೋದುಮಾನವನ ಸಹಜ ಗುಣ.ಇದಕ್ಕೆ ಭ್ರಷ್ಟಾಚಾರ ಬೆಳೆದು ನಿಂತಿರೋದು. ಇವುಗಳೆಲ್ಲವೂ ನಮ್ಮ ಕಣ್ಣ ಮುಂದೆ ನಡೆಯುತ್ತಿದೆ ಜೊತೆಗೆ ನಮ್ಮದೇ ಸಹಕಾರವೂ ಇದೆ. ಸತ್ಯ ತಿಳಿದವರಿಗೆ ಹೇಳುವ ಅಧಿಕಾರವಿಲ್ಲ.ಅಧಿಕಾರವಿದ್ದವರಿಗೆ ಸತ್ಯದ ಅರಿವಿಲ್ಲದೆ ಕಲಿಕೆಯು ಅಧರ್ಮ ಅಸತ್ಯ ಅನ್ಯಾಯವನ್ನು ಬೆಳೆಸಿದರೆ ಆತ್ಮಶುದ್ದವಾಗದೆ ಆತ್ಮಹತ್ಯೆಗಳಾಗುತ್ತದೆ. ಸರಳವಾದ ಸತ್ಯವನ್ನು ಅಸತ್ಯವಾಗಿಸೋದು ಸುಲಭವಾದರೂ ಸತ್ಯ ಬದಲಾಗದು. ಹೀಗಾಗಿ ಆತ್ಮನಿರ್ಭರ ಭಾರತ ,ಸ್ವತಂತ್ರ ಜ್ಞಾನದ ಕೊರತೆಯಲ್ಲಿದೆ. ಹಣದಿಂದ ಜ್ಞಾನ ಬರುವಂತಿದ್ದರೆ ಈ ಹೋರಾಟ ಹಾರಾಟ ಮಾರಾಟಗಳಿಂದ ಮಾನವಮಹಾತ್ಮನಾಗಿರಬಹುದಿತ್ತು.ಹಿಂದಿನ ಮಹಾತ್ಮರಿಗೂ ನಮಗೂ ಇರುವ ಅಂತರದಲ್ಲಿ ವ್ಯವಹಾರವೇ ಮುಖ್ಯವಾಗಿ ಧರ್ಮ ಕುಸಿದು ವ್ಯಾಪಾರದ ಸಂತೆಯಲ್ಲಿ ಮಾನವ ತಿರುಗುವುದೇ ಜೀವನದ ಸುಖ ಎಂದಾಗಿದೆ. ಮನೆಯೊಳಗೆ ವಾಸ್ತು ಇರದಿದ್ದರೂ ಸರಿ ವಸ್ತು ಇರಬೇಕು ಎನ್ನುವ ಹಂತಕ್ಕೆ ಬಂದು ನಿಂತಿದ್ದೇವೆ.
“ಕಲಬೇಡ, ಕೊಲಬೇಡ, ಹುಸಿಯನುಡಿಯಲು ಬೇಡ
ಮುನಿಯಬೇಡ ,ಅನ್ನರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ ,ಇದಿರಹಳಿಯಲುಬೇಡ ಇದೇ ಅಂತರAಗ ಶುದ್ದಿ ಇದೇ ಬಹಿರಂಗ ಶುದ್ದಿ ಇದೇ ಕೂಡಲಸಂಗಮನೊಲಿಯುವ ಪರಿ”
ಬಸವಣ್ಣ ಬಸವಣ್ಣನವರು ರಾಜಕೀಯ ಬಿಟ್ಟು ಹೊರಬಂದು ಪರಮಾತ್ಮನಿಗೆ ಶರಣಾದರು.ಈಗ ಅವರ ಹೆಸರಿನಲ್ಲಿ ಜಾತಿ ರಾಜಕೀಯ ಬೆಳೆಸಿಕೊಂಡು ರಾಜಕೀಯದೆಡೆಗೆ ಜನರನ್ನು ನಡೆಸಿದರೆ ಆತ್ಮಕ್ಕೆ ತೃಪ್ತಿ ಮುಕ್ತಿ ಸಿಗುವುದೆ? ದೇಶದಿಂದ ನನಗೇನು ಲಾಭಎಂದರೆ ಭಕ್ತಿ ಇದೆಯೆ?
ಒಟ್ಟಿನಲ್ಲಿ ಸಾಮಾನ್ಯ ಜ್ಞಾನದ ಕೊರತೆಯಲ್ಲಿ ವಿಜ್ಞಾನ ಜಗತ್ತು ಮಿತಿಮೀರಿದೆ. ಇದನ್ನು ಪ್ರಗತಿ ಎಂದರೆ ಅಜ್ಞಾನ ವಷ್ಟೆ.
ಯಾವುದೂ ಅತಿಯಾದರೆ ಗತಿಗೇಡು ಎಂದಿರುವರು ಜ್ಞಾನಿಗಳಾದವರು. ಜ್ಞಾನ ಎನ್ನುವುದು ಯಾರ ಸ್ವತ್ತಲ್ಲ.ಇದು ನಮ್ಮನ್ನು ಎತ್ತ ಕಡೆ ಸಾಗಿಸುತ್ತಿದೆ ಎಂದರಿತು ಮಾನವ ನಡೆದರೆ ಉತ್ತಮ. ಇಲ್ಲವಾದರೆ ತಾನೇ ತೋಡಿಕೊಂಡಿರುವ ಹೊಂಡದಲ್ಲಿಬಿದ್ದು ಮೇಲೇಳಲಾಗದಿದ್ದರೆಪರಮಾತ್ಮ ಕಾರಣ ಎನ್ನಲಾಗದು.ಪರಮಾತ್ಮನಿಗೇನೂ ಕಷ್ಟ ನಷ್ಟವಿರದು.ಕಾರಣ ಎಲ್ಲರಲ್ಲಿಯೂ ಒಂದೇ ಸಮನಾಗಿದ್ದರೂ ಅವರವರ ಋಣ ಮತ್ತು ಕರ್ಮಕ್ಕೆ ತಕ್ಕಂತೆ ಜೀವನ ನಡೆದಿರುತ್ತದೆ.
-ಭಗವತಿ ಬೆಂಗಳೂರು
ಆತ್ಮಶುದ್ಧಿಯಿಂದ ಆತ್ಮನಿರ್ಭರ



