ಒಂಟಾರಿಯೊ: ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿ ದ್ವೇಷಪೂರಿತ ಬರಹಗಳನ್ನು ಗೋಡೆಗಳ ಮೇಲೆ ಬರೆದಿರುವ ಘಟನೆ ಕೆನಡಾದ ಒಂಟಾರಿಯೊ ನಗರದಲ್ಲಿ ನಡೆದಿದೆ.
ಸ್ವಾಮಿನಾರಾಯಣ ದೇವಾಲಯದ ಹೊರ ಭಾಗದ ಗೋಡೆಯ ಮೇಲೆ ಕಪ್ಪು ಬಣ್ಣದಲ್ಲಿ ಭಾರತ ಮತ್ತು ಹಿಂದೂ ವಿರೋಧಿ ಬರಹಗಳನ್ನು ಬರೆಯಲಾಗಿದೆ. ಹಿಂದೂ ದೇವಾಲಯದ ಧ್ವಂಸವನ್ನು ದ್ವೇಷದ ಘಟನೆ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ವಿಂಡ್ಸರ್ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಅಲ್ಲಿನ ಪೊಲೀಸರು ನಡೆಸಿರುವ ಪ್ರಾಥಮಿಕ ತನಿಖೆ ಪ್ರಕಾರ ರಾತ್ರಿ 12ಗಂಟೆಯಲ್ಲಿ ಶಂಕಿತರಿಬ್ಬರು ಓಡಾಡುತ್ತಿರುವ ಬಗ್ಗೆ ವಿಡೀಯೋ ಲಭ್ಯವಾಗಿದೆ ಎಂದು ಹೇಳಲಾಗಿದೆ.
Leave a Review