ಬೆಂಗಳೂರು: ಗಂಭೀರವಾಗಿ ಹಲ್ಲೆ ನಡೆಸಿದ್ದರಿಂದ ತುಂಬು ಗರ್ಭಿಣಿ ಗಾಯಗೊಂಡು ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಗೋವಿಂದರಾಜನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಜಯಶೀಲಾ ಎಂಬ ಗರ್ಭಿಣಿಗೆ ಆರೋಪಿಗಳು ಒದ್ದು ಹಲ್ಲೆ ಮಾಡಿದ್ದಾರೆ.
ಪದ್ಮಮ್ಮ ಕಾವ್ಯ ಎಂಬುವವರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಈ ಅಮಾನವೀಯ ಘಟನೆ ಸಂಭವಿಸಿದೆ.
ಜಯಶೀಲಾ ಹೋಟೆಲ್ಗೆ ಬಂದಾಗ ಗಲಾಟೆಯಾಗಿತ್ತು. ಆಗ ಗಲಾಟೆ ಬೇಡವೆಂದು ರಾಜಿ ಮಾಡಿಕೊಂಡಿದ್ದಾರೆ. ಆದರೆ ರಾಜಿ ಬಳಿಕ ಮತ್ತೆ ಗರ್ಭಿಣಿ ಮೇಲೆ ಆರೋಪಿಗಳು ಮತ್ತೆ ಹಲ್ಲೆ ನಡೆಸಿದ್ದಾರೆ. ಗರ್ಭಿಣಿ ಎಂಬುದನ್ನು ನೋಡದೇ ಒದ್ದು ಹಲ್ಲೆ ಮಾಡಿದ್ದಾರೆ. ಈ ವೇಳೆ ಹೊಟ್ಟೆಗೆ ಗಂಭೀರ ಪೆಟ್ಟು ಬಿದ್ದಿದೆ.
ಘಟನೆಯ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳ ವಿಚಾರಣೆಗೆ ಮುಂದಾಗಿದ್ದಾರೆ. ಗಲಾಟೆ ಬೇಡವೆಂದು ರಾಜಿ ಮಾಡಿಕೊಂಡಿದ್ದಾರೆ. ಆದರೆ ರಾಜಿ ಬಳಿಕ ಮತ್ತೆ ಗರ್ಭಿಣಿ ಮೇಲೆ ಆರೋಪಿಗಳು ಮತ್ತೆ ಹಲ್ಲೆ ನಡೆಸಿದ್ದಾರೆ.
ಗರ್ಭಿಣಿ ಎಂಬುದನ್ನು ನೋಡದೇ ಒದ್ದು ಹಲ್ಲೆ ಮಾಡಿದ್ದಾರೆ. ಈ ವೇಳೆ ಹೊಟ್ಟೆಗೆ ಗಂಭೀರ ಪೆಟ್ಟು ಬಿದ್ದಿದೆ.ಘಟನೆಯ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳ ವಿಚಾರಣೆಗೆ ಮುಂದಾಗಿದ್ದಾರೆ.