ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದಕ್ಷಿಣ ವಿಭಾಗದ ಪೊಲೀಸರು ಇಂದು ಬೆಳಿಗ್ಗೆ ದಿಢೀರನೆ ರೌಡಿಗಳ ಮನೆಗೆ ಮೇಲೆ ದಾಳಿ ನಡೆಸಿರುತ್ತಾರೆ.
ದಕ್ಷಿಣ ವಿಭಾಗದ 18 ಪೊಲೀಸ್ ಠಾಣಾ ವ್ಯಾಪ್ತಿಯ ಠಾಣೆಯಲ್ಲಿರುವ ಅಂದಾಜು 200 ರೌಡಿ ಸಾಮಿಗಳ ಮೇಲೆ ಇಂದು ಬೆಳಿಗ್ಗೆ ದಿಢೀರನೇ ದಾಳಿ ನಡೆಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಸಾದ್ ದೇವರಾಜ್ ಇಂದು ಸಂಜೆಗೆ ತಿಳಿಸಿದರು.
ಅಧಿಕಾರಿಗಳಿಂದ ರೌಡಿ ಮನೆಗಳಲ್ಲಿದ್ದ ಮಾರಕಾಸ್ತ್ರ ಹಾಗೂ ಇತರೆ ವಸ್ತುಗಳನ್ನು ಸಹ ವಶಪಡಿಸಿಕೊಂಡಿರುತ್ತಾರೆ.