Indu Sanje

Follow:
7979 Articles

ಬೆಂಗಳೂರು ಕೋರಮಂಗಲದಲ್ಲಿರುವ ಹೆಸರಾಂತ ಸಫೈರ್ ಸ್ಕಿನ್ ಅಂಡ್ ಅಸ್ಥೆಟಿಕ್ ಕ್ಲಿನಿಕ್‌ನ ಆವರಣದಲ್ಲಿ, ಚರ್ಮರೋಗ ತಪಾಸಣೆ ಹೃದ್ರೋಗ ತಪಾಸಣೆಯ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿದ್ದರು, ಖ್ಯಾತ ಚರ್ಮರೋಗತಜ್ಞೆ ಡಾ.ಶೀಲಾನಟರಾಜ್, ಬೆಂಗಳೂರು ಜಯದೇವ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞರಾದ ವಿದೇಶಗಳಿಂದ ೪ ಎಫ್‌ಆರ್‌ಸಿಎಸ್ ಪದವಿ ಪಡೆದಿರುವ ಪ್ರೊ ಡಾ.ಹೆಚ್.ಎಸ್. ನಟರಾಜ ಶೆಟ್ಟಿರವರು ಉಚಿತ ಆರೋಗ್ಯ ಶಿಬಿರದಲ್ಲಿ ೫೦೦ಕ್ಕೂ ಹೆಚ್ಚಿನ ರೋಗಿಗಳಿಗೆ ಇಸಿಜಿ, ಎಕೋ, ಇತ್ಯಾದಿ ತಪಾಸಣೆ ಮಾಡಿ ೨ಲಕ್ಷಕ್ಕೂ ರೂಪಾಯಿ ಮೌಲ್ಯದ ಔಷಧಿಗಳನ್ನು ರೋಗಿಗಳಿಗೆ ಉಚಿತವಾಗಿ ವಿತರಿಸಿದರು. ಶಿಬಿರದಲ್ಲಿ ಡಾ.ಮೋಹಿತ್‌ಗೌಡ, ಡಾ.ರಾಕೇಶ್‌ರೆಡ್ಡಿ, ಡಾ.ದೀಪಕ್ ಅಟ್ವಿ, ಡಾ. ಕಾವ್ಯರೇಗಂಟಿ, ಡಾ.ವೈಷ್ಣವಿ, ಡಾ.ರಾಜಶ್ರೀ ಹಾಗೂ ಲ್ಯಾಬ್ ಟೆಕ್‌ನಿಷಿಯನ್ ನಂದಿತಾ ಇತರರಿದ್ದರು. ಚಿತ್ರ:ಜಿ.ಎಲ್.ಸಂಪAಗಿರಾಮುಲು

";