ಸ್ವಲೀನತೆ ಆಟಿಸಂ ಸ್ಪೆಕ್ಟ್ರಮ್ ದಿಸೋರ್ಡರ್ ಇದು ಒಂದು ನರಗಳ ಬೆಳವಣಿಗೆ ಪರಿಸ್ಥಿತಿಗಳ ಗುಂಪನ್ನು ವಿವರಿಸುತ್ತದೆ. ಸಾಮಾನ್ಯವಾಗಿ ಕೆಲವು ಮಕ್ಕಳಲ್ಲಿ ಒಂದರಿಂದ ಎರಡು ವರ್ಷದೊಳಗೆ ಕಂಡು ಬರುವ ರೋಗ ಲಕ್ಷಣಗಳು.
ಪ್ರತೀವರ್ಷ ಏಪ್ರಿಲ್ 2 ರಂದು ವಿಶ್ವ ಆಟಿಸಂ ಡೇ ಎಂದು ಆಚರಿಸಲಾಗುವುದು. ಮಕ್ಕಳ ನರಮಂಡಲದ ಬೆಳವಣಿಗೆಯಲ್ಲಿನ ನ್ಯೂನತೆ, ಸಾಮಾಜಿಕ ನಡವಳಿಕೆ ಹಾಗೂ ಸಂವಹನ ಕೊರತೆಯನ್ನು ಆಟಿಸಂ ಎಂದು ಗುರುತಿಸಲಾಗಿದೆ. ಸಾವಿರ ಮಕ್ಕಳಲ್ಲಿ ಒಂದೋ, ಎರಡು ಮಕ್ಕಳಲ್ಲಿ ಈ ರೀತಿಯ ಸಮಸ್ಯೆ ಕಾಣುತ್ತದೆ.
ಮಕ್ಕಳಲ್ಲಿ ವಿಭಿನ್ನವಾಗಿರುವ ಇಂಥ ಮಕ್ಕಳನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಅವರಿಗೆ ಸಹಾಯ ಮಾಡುವುದು ಅವಶ್ಯಕ. ಇನ್ನು ಅಂಥಹ ಮಕ್ಕಳ ಪೋಷಕರಿಗೆ ಆತ್ಮಸ್ಥೈರ್ಯ ನೀಡುವ ಅಗ್ಯತ ಕೂಡ ಇದೆ. ಈ ಕುರಿತು ಅರಿವು ಮೂಡಿಸುವ ಸಲುವಾಗಿ ಆಟಿಸಂ ಡೇ ಆಚರಿಸಲಾಗುವುದು.
ಆಟಿಸಂ ಇರುವ ಮಕ್ಕಳನ್ನು ನೋಡಿಕೊಳ್ಳುವುದು ಅತ್ಯಂತ ಮುಖ್ಯವಾದ ಕ್ಷೇತ್ರವಾಗಿದೆ. ಈ ಮಕ್ಕಳು ವ್ಯಕ್ತಿಯ ಆತ್ಮವಿಶ್ವಾಸ, ಸಹನೆ, ಸಹಕಾರ, ಮತ್ತು ಅವರ ಬದುಕಿಗೆ ಸ್ವಾರ್ಥಹೀನತೆ ಬೆಂಬಲಿಸುವುದು ಅತ್ಯಂತ ಅಗತ್ಯವಾಗಿದೆ. ಈ ಮೂಲಕ, ಅವರು ಆತ್ಮವಿಶ್ವಾಸ ಅಭಿವೃದ್ಧಿ ಮಾಡುವುದು, ಅವರ ನೈತಿಕತೆ ಮತ್ತು ಸಾಮಾಜಿಕ ಹಿತಚಿಂತನೆ ಬೆಳೆಸುವಲ್ಲಿ ಸಹಾಯ ಮಾಡಬಹುದು. ಈ ನಿಟ್ಟಿನಲ್ಲಿ ಪೋಷಕರಿಗೆ ಆಪ್ತಸಮಾಲೋಚನೆ ಅತ್ಯಗತ್ಯ.
ಕುಟುಂಬದ ಸದಸ್ಯರಲ್ಲಿ ಯಾರಿಗಾದರೂ ಈ ಸಮಸ್ಯೆಯಿದ್ದರೆ ವಂಶವಾಹಿಯಾಗಿ ಮಕ್ಕಳಲ್ಲಿ ಕಂಡು ಬರುವ ಸಾಧ್ಯತೆ ಇದೆ. ಅನಾರೋಗ್ಯಕರ ಆಹಾರ ಶೈಲಿ, ಜೀವನಶೈಲಿ, ಕಲುಷಿತ ವಾತಾವರಣ ಇವೆಲ್ಲಾ ಕೂಡ ಆಟಿಸಂ ಸಮಸ್ಯೆಗೆ ಒಂದು ಕಾರಣವಾಗಿದೆ. ವಯಸ್ಸಾದ ಮೇಲೆ ಮದುವೆ ಬಳಿಕ ಮಕ್ಕಳಾಗುವುದು, ವಯಸ್ಸು 40 ವರ್ಷ ದಾಟಿದ ಮೇಲೆ ಗರ್ಭಧಾರಣೆಯಾಗುವುದರಿಂದ ಈ ರೀತಿಯ ಸಮಸ್ಯೆ ಕಂಡು ಬರುವ ಸಾಧ್ಯತೆ ಹೆಚ್ಚು.
ಅವಧಿಗೆ ಮೊದಲೇ ಹರಿಗೆಯಾದರೆ ಕೆಲ ಮಕ್ಕಳಲ್ಲಿ ಈ ರೀತಿಯ ಸಮಸ್ಯೆ ಕಂಡು ಬರುವುದು. ಗರ್ಭಾವಸ್ಥೆಯಲ್ಲಿದ್ದಾಗ ಕೆಲವು ಅನಾರೋಗ್ಯಕರ ಔಷಧ ತೆಗೆದುಕೊಳ್ಳುತ್ತಿದ್ದರೆ ಮಕ್ಕಳಲ್ಲಿ ಆಟಿಸಂ ಕಾಣಿಸುವ ಸಾಧ್ಯತೆ ಹೆಚ್ಚು.ಆಟಿಸಂ ಇರುವ ಮಕ್ಕಳು ಸಾಮಾಜಿಕವಾಗಿ ಯಾರ ಜೊತೆಯೂ ಬೆರೆಯುವುದಿಲ್ಲ, ಕಲಿಕೆಯಲ್ಲಿ ಇತರ ಮಕ್ಕಳಂತೆ ಇರುವುದಿಲ್ಲ, ಸ್ವತಂತ್ರವಾಗಿ ಬೆಳೆಯಲು ಸಾಧ್ಯವಿಲ್ಲ. ಅಂಥಹ ಮಕ್ಕಳು ಮಾತ್ರವಲ್ಲ, ಆ ಕುಟುಂಬದವರು ಕೂಡ ಸಾಕಷ್ಟು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಮಕ್ಕಳು ಬೆಳವಣಿಗೆಯಾದರೂ ಬೇರೆ ಆರೋಗ್ಯಕರ ಮಕ್ಕಳಂತೆ ಇತರ ಮಕ್ಕಳ ಹಾಗೆ ಬೆಳೆಯಲು ಸಾಧ್ಯವಾಗುವುದಿಲ್ಲ.
ಕೆಲವು ನಿಯಮ ಪಾಲನೆಯಿಂದ ಆ ರೀತಿಯ ಮಕ್ಕಳನ್ನು ನೋಡಿಕೊಳ್ಳುವಲ್ಲಿ ಹಾಗು ಬಗೆಹರಿಸುವಲ್ಲಿ ಸಹಾಯಕವಾಗಬಹುದು.
ಅವರು ಆಟವಾಡುವಾಗ ಅವರ ಆಟಗಳನ್ನು ಗಮನಿಸುವುದು ಮತ್ತು ಬೇರೆ ಮಕ್ಕಳೊಂದಿಗೆ ಅವರ ನಡಾವಳಿಕೆ ಹೇಗಿರುತ್ತದೆ ಎಂದು ಗಮನಿಸುತ್ತಿರಬೇಕು. ಹೀಗೆ ಅವರ ಸಮಸ್ಯೆಗಳನ್ನು ಗುರುತಿಸಬಹುದು.ಮಕ್ಕಳು ಹೆಚ್ಚು ವಿನಮ್ರರಾಗಿದ್ದಾರೆಯೇ ಅಥವಾ ಅವರ ಸ್ವಭಾವಗಳು, ಭಾವನೆಗಳನ್ನು ಗುರುತಿಸಿ ಅವರು ಪ್ರತಿಕ್ರಿಯೆ ನೀಡುವ ರೀತಿಯನ್ನು, ಅವರು ಯಾವುದರಲ್ಲಿ ಆಸಕ್ತಿ ಹೊಂದಿದಾರೆ ಎಂದು ಗಮನಿಸಬೇಕು. ಅವರನ್ನು ಪ್ರೋತ್ಸಾಹಿಸುತ್ತಿರಬೇಕು ಮತ್ತು ಉತ್ಸಾಹದಿಂದ ನೋಡಿಕೊಳ್ಳಬೇಕು, ಅವರಿಗೆ ಬೆಂಬಲವಾಗಿ ಸದಾ ಅವರ ಜೊತೆಗಿರುವುದು ಬಹಳ ಮುಖ್ಯ.
ಆಟಿಸಂ ಇರುವ ಮಕ್ಕಳ ಆಹಾರ ಪದ್ಧತಿ, ಬೆಳವಣಿಗೆ ಹಾಗು ಮಕ್ಕಳ ಸ್ವಾಸ್ಥ್ಯವನ್ನು ಬಲಗೊಳಿಸುವುದು ಮುಖ್ಯವಾಗಿದೆ. ಮಕ್ಕಳು ಸಂಪೂರ್ಣ ಪೌಷ್ಠಿಕಾಂಶದ ಆಹಾರ ಪದ್ಧತಿಯನ್ನು ಹೊಂದಿರಬೇಕು. ದಿನನಿತ್ಯ ಅನ್ನ, ತರಕಾರಿ, ಹಣ್ಣು, ಮೊಳಕೆ ಕಾಳುಗಳಂತಹ ಆಹಾರವನ್ನು ಸೇವಿಸಬೇಕು.
ಆಟಿಸಂ ಇರುವ ಮಕ್ಕಳ ಬೆಳವಣಿಗೆ ಮಾನಸಿಕ ಬೆಳವಣಿಗೆಗಿಂತ ದೈಹಿಕ ಬೆಳವಣಿಗೆ ಹೆಚ್ಚಾಗಿರುತ್ತದೆ. ಶುದ್ಧ ಪರಿಸರದಲ್ಲಿ ಈ ರೀತಿಯ ಮಕ್ಕಳು ಬೆಳೆಯಬೇಕು. ಬಗೆ ಬಗೆಯ ಒಳಾಂಗಣ ಹಾಗು ಹೊರಾಂಗಣ ಆಟಗಳು ಮಕ್ಕಳಿಗೆ ಆತ್ಮವಿಶ್ವಾಸ ಮೂಡಿಸುತ್ತದೆ ಮತ್ತು ಮಾನಸಿಕವಾಗಿ ಅಭಿವೃದ್ಧಿ ಹೊಂದಲು ಸಹಾಯಕವಾಗುತ್ತವೆ.
ಆಟಿಸಂ ಇರುವ ಮಕ್ಕಳು ಸಾಮಾನ್ಯವಾಗಿ ತಮ್ಮ ನಡತೆ ಮತ್ತು ಮಾತುಗಳ ರೀತಿಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಈ ಮಕ್ಕಳು ತಮ್ಮ ಆಟಗಳ ಪ್ರವೃತ್ತಿಗೆ ಅನುಗುಣವಾಗಿ ಮಾತನಾಡುತ್ತಾರೆ. ಕೆಲವು ಮಕ್ಕಳು ಮಾತುಗಳ ಮೂಲಕ ಆವರಣದಲ್ಲಿ ತಮ್ಮ ಭಾವನೆಗಳನ್ನು ಹೊರಹಾಕುತ್ತಾರೆ, ಇನ್ನು ಕೆಲವರು ತಮ್ಮ ಮಾತುಗಳ ಮೂಲಕ ಸಂವಾದ ಮಾಡುತ್ತಾರೆ. ಇಂತಹ ಮಕ್ಕಳನ್ನೂ ಸಹ ಸಾಮಾನ್ಯವಾಗಿ ಇರುವ ಮಕ್ಕಳಂತೆಯೇ ಕಾಣಬೇಕು. ಅವರ ಮನಸಿಗೆ ನೋವಾಗದಂತೆ ನೋಡಿಕೊಳ್ಳುವುದು ಪೋಷಕರ ಕರ್ತವ್ಯವಾಗಿದೆ.
ಚಂಪಾ ಚಿನಿವಾರ್ ಆಪ್ತಸಮಾಲೋಚಕಿ