ಬೆಂಗಳೂರು: ಚಾಮರಾಜಪೇಟೆ ಪೊಲೀಸರು ನಿಯಮತುಲ್ಲಾ ಖಾನ್(24) ಎಂಬಾತನನ್ನು ಬಂಧಿಸಿ 12 ಲಕ್ಷ ರೂ ಮೌಲ್ಯದ ಆಟೋರಿಕ್ಷಗಳನ್ನು ವಶಪಡಿಸಿಕೊಂಡಿರುತ್ತಾರೆ.
ಈತನು ಮತ್ತು ರಫೀಕ್ ಎಂಬುವರು ಸುಮಾರು ಏಳು ಸಾರ್ವಜನಿಕರು ಓಡಾಡುವ ಆಟೋಗಳನ್ನು ಕಳವು ಮಾಡಿದ್ದರು.ಪೀಣ್ಯ ಪೊಲೀಸ್ ಠಾಣೆಯಲ್ಲಿ ಒಂದು ಆಟೋ ಕಳವು ವರದಿ ದಾಖಲಾಗಿರುತ್ತದೆ ಉಳಿದ ಆರು ಪ್ರಕರಣ ಮಾಲೀಕರನ್ನು ಪತ್ತ ಮಾಡಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ರಫೀಕ್ ಎಂಬುವನು ತಲೆಮಾರಿಸಿಕೊಂಡಿದ್ದು ಪತ್ತೆ ಮಾಡಲು ಬಲೆ ಬೀಸಿರುತ್ತಾರೆ.