ಹೊಸಕೋಟೆ: ನಗರದ ಕೋಟೆ ಪ್ರದೇಶದಲ್ಲಿರುವ ಐತಿಹಾಸಿಕ ಶ್ರೀ ಅವಿಮುಕ್ತೇಶ್ವರಸ್ವಾಮಿ ದೇವಾಲಯವನ್ನು ಮಹಾಶಿವರಾತ್ರಿ ಆಚರಣೆಗೆ ಸಜ್ಜುಗೊಳಿಸಲು ಟೀಂ ಎಸ್ಬಿಜಿ ಸದಸ್ಯರು ಸ್ವಚ್ಛತಾ ಕಾರ್ಯ ಕೈಗೊಂಡರು.
ಕಳೆದ 4 ವರ್ಷಗಳಿಂದ ಮಹಾಶಿವರಾತ್ರಿಗಾಗಿ ದೇವಾಲಯ ಒಳಭಾಗ ಹಾಗೂ ಮುಂಭಾಗದ ಗೋಪುರ ಒಳಗೊಂಡಂತೆ ಎಲ್ಲಾ ಸ್ಥಳಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಪೂಜಾ ಕಾರ್ಯಗಳು ಮುಕ್ತಾಯಗೊಂಡ ನಂತರ ಭಕ್ತಾಧಿಗಳಿಗೆ ನಿರಂತರವಾಗಿ ಪ್ರಸಾದ ವಿನಿಯೋಗ ಸಹ ಮಾಡಲಾಗುವುದು. ದೇವಾಲಯಕ್ಕೆ ಭೇಟಿ ನೀಡುವ ಭಕ್ತಾಧಿಗಳು ಆವರಣವನ್ನು ಸ್ವಚ್ಛವಾಗಿರಿಸಲು ಸಹಕರಿಸಬೇಕು ಎಂದು ಟೀಂ ಎಸ್ಬಿಜಿಯ ಮುಖ್ಯಸ್ಥೆ ಪ್ರತಿಭಾ ಶರತ್ ಬಚ್ಚೇಗೌಡ ಮನವಿ ಮಾಡಿದರು.
ನಗರಸಭೆ ಸದಸ್ಯರಾದ ಕೇಶವಮೂರ್ತಿ, ಮಂಜುನಾಥ್, ಜಮುನಾ ಹರೀಶ್, ಟೀಂ ಎಸ್ಬಿಜಿಯ ಮುನಿರಾಜು, ರಾಕೇಶ್, ಗೋಪಿ, ವಿಷ್ಣು, ವಿಜಯ್, ಸುರೇಶ್, ಮುಖಂಡರಾದ ವಾಸುದೇವಮೂರ್ತಿ, ಚಂದ್ರೇಗೌಡ, ಶಾಂತಕುಮಾರ್, ಆರ್ಟಿಸಿ ಗೋವಿಂದರಾಜು, ಟೀಂ ಎಸ್ಬಿಜಿ ನೂರಾರು ಸದಸ್ಯರು ಭಾಗವಹಿಸಿದ್ದರು.