ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಟಾಸ್ಕ್ಗಳು ಸಹ ರೋಚಕತೆ ಪಡೆದುಕೊಂಡು ಸಾಗುತ್ತಿದೆ. ಎಲ್ಲದರಲ್ಲೂ ಕಷ್ಟ ಎನಿಸುವ ಟಾಸ್ಕ್ಗಳು ಸಿಗುತ್ತಿದೆ. ಎಲ್ಲರೂ ಕೂಡ ತಮ್ಮ ತಂಡ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದಾರೆ. ಇದಕ್ಕಾಗಿ ಕ್ಯಾಪ್ಟನ್ಸಿ ಟಾಸ್ಕನ್ನು ಬಹಳ ಅಗ್ರೆಸ್ಸಿವ್ ಆಗಿ ಎಲ್ಲಾ ಸ್ಪರ್ಧಿಗಳು ಆಡುತ್ತಿದ್ದಾರೆ. ವಿನಯ್ ಜಗಳ ಮಾಡದೇ ಆಟ ಆಡಿದಂತು ಇಲ್ಲಿವರೆಗೂ ಕಂಡಿಲ್ಲ.
ಮತ್ತೆ ಟಾಸ್ಕ್ ವಿಚಾರವಾಗಿ ಎದುರಾಳಿ ತಂಡದ ಅವಿನಾಶ್ ಶೆಟ್ಟಿ ಜೊತೆ ವಿನಯ್ ಕಾದಾಟಕ್ಕೆ ಇಳಿದಿದ್ದಾರೆ. ಅವಿನಾಶ್ ಶೆಟ್ಟಿ ತಾವೇನು ವಿನಯ್ಗಿಂತ ಕಮ್ಮಿ ಇಲ್ಲ ಎಂಬುದನ್ನು ತೋರಿಸಿದ್ದಾರೆ. ಇಷ್ಟು ದಿನ ಸೈಲೆಂಟಾಗಿ ಎಲ್ಲವನ್ನು ಗಮನಿಸುತ್ತಿದ್ದ ಅವಿನಾಶ್ ಶೆಟ್ಟಿ ಈಗ ವಿನಯ್ ಜೊತೆಗೆ ಕಾದಾಟಕ್ಕೆ ಇಳಿದಿದ್ದಾರೆ. ಈ ಮನೆಯಲ್ಲಿ ನೀನೊಬ್ಬರೇ ವಿಲ್ಲನ್ ಅಲ್ಲ ಎಂಬ ಮಾತನ್ನು ಕೂಡ ವಿನಯ್ಗೆ ಅವಿನಾಶ್ ಹೇಳಿದ್ದಾರೆ. ಈ ಮಾತಿಗೆ ವಿನಯ್ ಕೋಪ ಮಾಡಿಕೊಂಡಿದ್ದಾರೆ.
ಇನ್ನು ಸಿರಿ ಎರಡು ತಂಡಗಳ ಉಸ್ತುವಾರಿಯನ್ನ ವಹಿಸಿಕೊಂಡಂತೆ ಕಾಣಿಸುತ್ತಿದೆ. ಇಬ್ಬರೂ ಕೂಡ ಜಗಳಕ್ಕೆ ನಿಂತುಕೊಂಡಾಗ ಸಿರಿ ಬಂದು ಬಿಡಿಸುವ ಪ್ರಯತ್ನ ಮಾಡಿದ್ದಾರೆ. ನಂತರ ಯಾವಾಗ ಜಗಳ ತಾರಕಕ್ಕೇರಿತು ಆಗ ಇಬ್ಬರನ್ನೂ ಕೂಡ ತಂಡದಿಂದ ಹೊರಗಿಡುತ್ತೇನೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಅವಿನಾಶ್ ಶೆಟ್ಟಿ ನಮ್ರತಾ ಎಲ್ಲರೂ ಕೂಡ ಸಂಗೀತಾ ತಂಡದಲ್ಲಿ ಆಡುತ್ತಿರುವುದಕ್ಕೆ ವಿನಯ್ ವರ್ತನೆ ನಮ್ರತಾಗೂ ಬೇಸರ ತರಿಸಿದಂತೆ ಕಾಣುತ್ತಿದೆ. ಅದೇ ರೀತಿ ಮುಖಭಾವವನ್ನು ಹೊತ್ತುಕೊಂಡು ಜಗಳವಾಡುವಾಗ ನಿಂತುಕೊಂಡಿದ್ದಾರೆ. ಇಷ್ಟು ದಿನ ವಿನಯ್ ಕಾರ್ತಿಕ್ ಜೊತೆಗೆ ಜಗಳ ಮಾಡಿಕೊಂಡು ಟಾಸ್ಕ್ನ್ನು ಆಡುತ್ತಿದ್ದರು. ಈಗ ಕಾರ್ತಿ ಕೂಡ ವಿನಯ್ ಜೊತೆಗೆ ಆಟವಾಡುತ್ತಾ ಇರುವುದಕ್ಕೆ ತುಂಬಾ ಕ್ಲೋಸ್ ಆಗಿ ಇರುವಂತೆ ಕಾಣಿಸುತ್ತಿದೆ.
ಇದಕ್ಕಾಗಿ ಎದುರಾಳಿ ತಂಡದ ಅವಿನಾಶ್ ಜೊತೆಯಲ್ಲಿ ವಿನಯ್ ಜಗಳವನ್ನು ಆಡಿದ್ದಾರೆ.ಇದರಿಂದಾಗಿ ಕ್ಯಾಪ್ಟನ್ಸಿ ಟಾಸ್ಕ್ಗೆ ನಡೆಯುತ್ತಿರುವ ಆಟವೂ ಕೂಡ ರದ್ದಾಗುವ ಎಲ್ಲಾ ಲಕ್ಷಣಗಳು ಕೂಡ ಕಾಣಿಸುತ್ತಾ ಇದೆ. ಕಳೆದ ವಾರವು ಕೂಡ ವರ್ತೂರು ಸಂತೋಷ್ ಅವರನ್ನು ಅನ್ಯಾಯವಾಗಿ ಕ್ಯಾಪ್ಟೆನ್ಸಿ ಟಾಸ್ಕ್ನಲ್ಲಿ ವಿನ್ ಆಗುವಂತೆ ಮಾಡಿದ್ದರು. ಇದಾದ ನಂತರ ಬಿಗ್ ಬಾಸ್ ಕ್ಯಾಪ್ಟನ್ಸಿ ಟಾಸ್ಕ್ ಆಡುವುದು ಬೇಡ ಎಂದು ನಿರ್ಣಯಿಸಿದ್ದರು. ಈಗ ಮನಸ್ಸು ಬದಲಿಸಿ ಕೊಂಡು ಮತ್ತೆ ಕ್ಯಾಪ್ಟನ್ಸಿ ಆಡಿಸುವ ವೇಳೆಯೂ ಜಗಳ ಶುರುವಾಗಿದೆ.
ನೀವು ಒಬ್ಬರೇ ವಿಲನ್ ಅಲ್ಲ ಎಂದ ಅವಿ ಇದೀಗ ಬಿಗ್ ಬಾಸ್ ಹೊಸ ಟಾಸ್ಕ್ನ್ನು ನೀಡಿದ್ದಾರೆ. ಅದು ಏನೆಂದರೆ ಬಟ್ಟೆಗಳನ್ನು ಎದುರಾಳಿ ತಂಡಗಳಿಂದ ಶುಭ್ರವಾಗಿ ಕಾಪಾಡಿಕೊಳ್ಳಬೇಕು ಎಂಬ ನಿಯಮ ಮಾಡಿ ಟಾಸ್ಕ್ ನೀಡಿದ್ದಾರೆ. ಎರಡು ತಂಡದಲ್ಲಿ ಬಟ್ಟೆಗಳನ್ನು ಒಣ ಹಾಕಲಾಗಿದ್ದು ಅದರಲ್ಲಿ ಎದುರುಳಿ ತಂಡದವರು ಬಂದು ಬಣ್ಣ ಹಚ್ಚಿದರೆ, ಮತ್ತೆ ಮತ್ತೆ ಒಗೆದು ಆ ಬಟ್ಟೆಯನ್ನ ಸರಿಯಾದ ಕ್ರಮದಲ್ಲಿ ಇಡಬೇಕು ಎಂಬುವುದು ನಿಯಮವಾಗಿದೆ. ಇಲ್ಲಿ ಅವಿನಾಶ್, ವಿನಯ್ ಒಣಗಿ ಹಾಕಿದ್ದ ಬಟ್ಟೆಗೆ ಬಂದು ಬಣ್ಣ ಹಚ್ಚಿದ್ದಾರೆ. ನಂತರ ಜೋರಾಗಿ ಎಳೆದು ಕೊಂಡು ಹೋಗಿದ್ದಾರೆ.
ಅವಿನಾಶ್ ಜೊತೆಗೆ ವಿನಯ್ ಜಗಳ ಅವಿನಾಶ್ ಮಾಡಿದ ಕೆಲಸಕ್ಕೆ ವಿನಯ್ಗೆ ಕೋಪ ಬಂದಿದ್ದು ಬಟ್ಟೆಯನ್ನು ಎಳೆಯಬಾರದು ಎಂದು ಹೇಳಿದ್ದಾರೆ. ಇದಕ್ಕೆ ಅವಿನಾಶ್ ಮತ್ತೆ ಮಾತನಾಡಿದ್ದು ವಿನಯ್ಗೆ ಇಷ್ಟವಾಗಿಲ್ಲ. ಈ ವಿಚಾರಕ್ಕಾಗಿ ಇಬ್ಬರ ನಡುವೆಯೂ ಜಗಳವಾಗಿದ್ದು ವಿನಯ್ ಅವಿನಾಶ್ ಅವರನ್ನು ಕೆಳಗೆ ತಳ್ಳಿದ್ದಾರೆ. ಈ ವೇಳೆ ಸಿರಿ ಮಧ್ಯಪ್ರವೇಶ ಮಾಡಿ ಇಬ್ಬರನ್ನು ಜಗಳ ಮಾಡದಂತೆ ಸಮಾಧಾನ ಮಾಡಿದ್ದಾರೆ.