ಬೆಂಗಳೂರು: ವಿಶ್ವ ಮಾನವ ರಾಷ್ಟ್ರ ಕವಿ ಕುವೆಂಪು ಕಲಾನಿಕೇತನ, ಸ್ನೇಹ ಶ್ರೀ ರಕ್ಷಾ ಸಂಗೀತ ನೃತ್ಯ ಸಾಂಸ್ಕೃತಿಕ ಆಕಾಡೆಮಿವತಿಯಿಂದ ಹಿರಿಯ ಚಲನ ಚಿತ್ರ ನಟ ಹೊನ್ನವಳ್ಳಿ ಅವರಿಗೆ ನಟಸಾರ್ವಬೌಮ ಡಾ.ರಾಜ್ ಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ, ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್,ಡಾ.ರಾಜ್ ಕುಮಾರ್ ಅಂತಹ ನಟರಿಂದ ಕನ್ನಡ ಭಾಷೆ, ಸಂಸ್ಕೃತಿ ಉಳಿದು ಬೆಳೆದುಕೊಂಡು, ಕನ್ನಡಕ್ಕೆ ಅವರಯ ನೀಡಿದ ಕೊಡುಗೆ ಅಪಾರ,ಎಂತಹ ಮೇರು ನಟರಾಗಿದ್ದರೂ ಅಹಂಕಾರದಿಂದ ನಡೆದುಕೊಳ್ಳಲಿಲ್ಲ ಬಾರೀ ದೊಡ್ಡ ಪ್ರಮಾಣದ ಅಭಿಮಾನಿಗಳ ಬಳಗವನ್ನು ಹೊಂದಿದ್ದರೂ ಅಭಿಮಾನಿಗಳು ಸಹ ಅವರಂತೆಯೇ ಕನ್ನಡ ನಾಡು,
ಭಾಷೆ ಸಂರಕ್ಷಣೆ ವಿಚಾರದಲ್ಲಿ ಗಂಭೀರವಾಗಿ ನಡೆದುಕೊಂಡಿದ್ದಾರೆ,ಇಂದಿನ ಕೆಲ ನಟರ ಅಭಿಮಾನಿಗಳು,ನಟರು ನಡೆದುಕೊಳ್ಳುವ ರೀತಿ ನೋಡಿದರೆ ಬೇಸರವಾಗುತ್ತದೆ,ಡಾ.ರಾಜ್ ಕುಮಾರ್ ಅವರ ಅನೇಕ ಚಲನ ಚಿತ್ರಗಳಲ್ಲಿ ನಟಿಸಿರುವ ಹೊನ್ನವಳ್ಳಿ ಕೃಷ್ಣ ಅವರಿಗೆ ಡಾ.ರಾಜ್ ಕುಮಾರ್ ಪ್ರಶಸ್ತಿ ನೀಡಿ ಗೌರವಿಸುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.