ಬೆಂಗಳೂರು: ನಗರದ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಬೆಂಗಳೂರು ನಗರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಪರಿಷತ್ತಿನ ಸಂಸ್ಥಾಪಕರಾದ ಎಚ್ಆರ್ ಎಚ್.ಎಸ್. ರೇಣುಕಾ ಪ್ರಸಾದ್ ಅವರ ಹೆಸರಲ್ಲಿ ನೀಡುವ ಪ್ರಶಸ್ತಿ ಸಮಾರಂಭವನ್ನು ಏರ್ಪಡಿಸಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಮ್ ಕೆ.ಹನುಮಂತಯ್ಯ ನವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ನಡೆದ ವಿಚಾರ ಸಂಕೀರ್ಣದಲ್ಲಿ ಡಾ. ಶಾಂತರಾಜುರವರು ಮಾತನಾಡಿ ಅಂತರಂಗದಲ್ಲಿ ಮೂಡುವ ಭಾವನೆಯನ್ನು ಸಂಕ್ಷಿಪ್ತವಾಗಿ ಚುಟುಕದ ರೂಪದಲ್ಲಿ ರಚಿಸಬಹುದು. ಇಂದಿನ ಗಡಿಬಿಡಿ ಯುಗದಲ್ಲಿ ಕಡಿಮೆ ಅವಧಿಯಲ್ಲಿ ರಚಿಸಿದ ಚುಟುಕಗಳು ಜನಪ್ರಿಯಗೊಳ್ಳುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಲೇಖಕೆ ಹಾಗೂ ಮಾಜಿ ಸಚಿವೆ ಲೀಲಾದೇವಿ ಪ್ರಸಾದ್, ಡಾಕ್ಟರ್ ನ ಗೀತಾಚಾರ್ಯ, ಅಧ್ಯಕ್ಷರಾದ ಎಸ್ ಆರ್ ವಿಜಯ ಸಮರ್ಥ, ಉಪಸ್ಥಿತರಿದ್ದರು. ಚುಟುಕ ಸಾಹಿತಿಗಳಾದ ಏ ರೇಣುಕಾ ಪ್ರಸನ್ನ ಮತ್ತು ಪತ್ತಂಗೆ ಮುರಳಿಯವರಿಗೆ ‘ಎಚ್. ಎಸ್. ರೇಣುಕಾ ಪ್ರಸಾದ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಮಧ್ಯೆ ಚುಟುಕು ಕವಿಗೋಷ್ಠಿಯನ್ನು ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಶ್ರೀಲತಾ. ಎ. ಅವರು ವಹಿಸಿದ್ದರು.