ಪ್ರಶಸ್ತಿ ಪ್ರದಾನ ರಾಜ್ಯ ಚಲನಚಿತ್ರಪ್ರಶಸ್ತಿ ಸಮಾರಂಭ ಮೈಸೂರಿನಲ್ಲಿ ಇತ್ತೀಚೆಗೆ ನಡೆದಿತ್ತು… ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನಿಸಿದರು. `ಸರಕಾರಿ ಹಿರಿಯ ಪ್ರಾಥಮಿಕ ಶಾಲೆ’ ಚಿತ್ರಕ್ಕೆ ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ದಂಪತಿ ಸಹಜವಾಗಿ ಆಕರ್ಷಣೆಯ ಬಿಂದು ಆಗಿದ್ದರು.. ಪ್ರಶಸ್ತಿ ಪ್ರದಾನದ ಬಳಿಕ ಮುಖ್ಯಮಂತ್ರಿಗಳ ಭಾಷಣದಲ್ಲಿಯೂ
ಕಾಂತಾರದ ಪ್ರಸ್ತಾಪ ಆಗಿತ್ತು!!.
ಕಾರ್ಯಕ್ರಮದ ಬಂದೋಬಸ್ತ್ ಮೇಲ್ವಿಚಾರಣೆಯಲ್ಲಿದ್ದ ಡಿ. ಐ. ಜಿ. ಬೋರಲಿಂಗಯ್ಯ ಹಾಗೂ ಮೈಸೂರು ಪೊಲೀಸ್ ಆಯುಕ್ತೆ ಸೀಮಾಲಾಟ್ಕರ್ ಹೀಗೊಂದು ಫೋಟೋ ಕ್ಲಿಕ್ಕಿಸಿಕೊಂಡರು. ಪೊಲೀಸ್ ಅಧಿಕಾರಿಗಳೂ ಸಂಭ್ರಮ ಪಟ್ಟಿದ್ದನ್ನು ಅವರ ಮುಖವೇ ಹೇಳುತ್ತಿದೆ..



