ಬೆಂಗಳೂರು: ನಗರದ ಆಕಾಶ್ ಶಿಕ್ಷಣ ಸೇವಾ ಸಂಸ್ಥೆಯ ವಿದ್ಯಾರ್ಥಿ ಪ್ರೀತಮ್ ರಾವಳಪ್ಪ ಪನ್ಸುಡಕರ್ ಅವರು ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.99.83 ಅಂಕಗಳನ್ನು ಪಡೆದಿದ್ದಾನೆ.ಐದು ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದು, ಅಂದರೆ 600 ರಲ್ಲಿ 599 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದಾನೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ ಹಾಗೂ ಸಂಸ್ಕೃತ ವಿಷಯಗಳಲ್ಲಿ ನೂರಕ್ಕೆ ನೂರು ಹಾಗೂ ಇಂಗ್ಲೀಷಿನಲ್ಲಿ 99 ಅಂಕ ಪಡೆದಿದ್ದಾನೆ.
ಪ್ರೀತಮ್ ಅವರ ಈ ಅತ್ಯಮೋಘ ಸಾಧನೆಗೆ ಆಕಾಶ್ ಶಿಕ್ಷಣ ಸಂಸ್ಥೆಯ ಸ್ಥಳೀಯ ನಿರ್ದೇಶಕ ಧೀರಜ್ ಮಿಶ್ರಾ ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ಪ್ರೀತಮ್ ಬಗ್ಗೆ ಹೆಮ್ಮೆ ಏನಿಸುತ್ತಿದೆ. ಇದು ಆತನ ಪರಿಶ್ರಮಕ್ಕೆ ಸಂದ ಗೆಲುವು. ಈತನ ಶ್ರಮಕ್ಕೆ ಪಾಲಕರ ಪ್ರೋತ್ಸಾಹ ತುಂಬಾ ಇದೆ. ಪ್ರೀತಮ್ ಹಾಗೂ ಇತರ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೂ ಅಭಿನಂದನೆ ಕೋರುತ್ತೇನೆ. ನಿಮ್ಮ ಭವಿಷ್ಯಕ್ಕೂ ಶುಭ ಕೋರುತ್ತೇನೆ ಎಂದರು.
ಪ್ರೌಢ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಐಐಟಿ-ಜೆಇಇ ಕೋಚಿಂಗ್ ಪಡೆಯುವಲ್ಲಿ ಆಕಾಶ್ ಸದಾ ಮುಂದಿದೆ. ಇತ್ತೀಚೆಗೆ ಅಭಿವೃದ್ದಿ ಆಧಾರಿತ ಗಣಕಯಂತ್ರ ತರಬೇತಿ ನೀಡುವತ್ತ ಆಕಾಶ ಸಂಸ್ಥೆ ಚಿತ್ತ ಹರಿಸಿದೆ. ಈ ಮೂಲಕ ಐ-ಟ್ಯೂಟರ್ ವೇದಿಕೆಯು ರೆಕಾರ್ಡ್ ಮಾಡಿದ ವಿಡಿಯೋ ಉಪನ್ಯಾಸ ಒದಗಿಸುತ್ತಿದ್ದು, ಇದು ವಿದ್ಯಾರ್ಥಿಗಳಿಗೆ ಸ್ವಯಂ ಆಗಿ ಕಲಿಕೆಯತ್ತ ಆಸಕ್ತಿ ವಹಿಸಲು ಸಹಾಯ ಮಾಡಿದೆ. ಮೋಕ್ ಟೆಸ್ಟ್ ಕೂಡ ನೈಜ ಪರೀಕ್ಷೆಯನ್ನು ಪರಿಣಾಮಕಾರಿಯಾಗಿ ಆತ್ಮವಿಶ್ವಾಸದಿಂದ ಎದುರಿಸಲು ಸಹಕಾರ ನೀಡುತ್ತಿದೆ.
ನೀಟ್(ಮೆಡಿಕಲ್), ಜೆಇಇ(ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ) ಹಾಗೂ ಎನ್ಟಿಎಸ್ಇ ಮತ್ತು ಒಲಿಂಪಿಯಾಡ್ ಮುಂತಾದ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಪೂರಕ ಹಾಗೂ ಸತತ ತರಬೇತಿ ಪಡೆಯಲು ಆಕಾಶ್ ಶಿಕ್ಷಣ ಸೇವಾ ಸಂಸ್ಥೆಯು ದೇಶದಲ್ಲೇ ಮುಂಚೂಣಿಯಲ್ಲಿದೆ. ಕಳೆದ 35 ವರ್ಷಗಳಿಂದ ನಾಲ್ಕು ಲಕ್ಷಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು, ಆಕಾಶ್ ಶಿಕ್ಷಣ ಸೇವಾ ಸಂಸ್ಥೆಯ ಸುಮಾರು 315 ಕೇಂದ್ರಗಳಲ್ಲಿ ಅಗತ್ಯ ಶಿಕ್ಷಣ ಹಾಗೂ ತರಬೇತಿ ಪಡೆಯುತ್ತಿದ್ದಾರೆ. ಈ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಮಾರುಕಟ್ಟೆಯನ್ನು ಹೊಂದಿದೆ.