ಚಾಮರಾಜನಗರ: ಭಗವಾನ್ ಬಿರ್ಸಾಮುಂಡ ಅವರ ಜಯಂತಿ ಪ್ರಯುಕ್ತ ಚಾಮರಾಜನಗರ ತಾಲ್ಲೂಕಿನ ಕೋಳಿಪಾಳ್ಯ ಗ್ರಾಮದ ಬುಡಕಟ್ಟು ಆಶ್ರಮ ಶಾಲೆಯಲ್ಲಿ ಪರಿಸರ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಸೋಮವಾರ (ನ.೧೦) ಆಯೋಜಿಸಲಾಗಿತ್ತು. ಗಿಡ ನೆಡುವ ಮೂಲಕ ಪ್ರತಿ ವಿದ್ಯಾರ್ಥಿಗಳಿಗೆ ಗಿಡ ಪೋಷಣೆಯ ಉಸ್ತುವಾರಿ ವಹಿಸಿ ವಿದ್ಯಾರ್ಥಿಗಳ ನಾಮಫಲಕಗಳನ್ನು ಗಿಡಗಳಿಗೆ ಹಾಕಲಾಯಿತು. ಸೋಲಿಗ ಸಮುದಾಯದ ಯುವ ಮುಖಂಡರಾದ ಶಿವಣ್ಣ ಹಾಗೂ ಮಹೇಶ್ ಅವರು ಭಾಗವಹಿಸಿ ಪರಿಸರದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.
ಶಾಲೆಯ ಮುಖ್ಯ ಶಿಕ್ಷಕರಾದ ಎಂ. ಸೋಮಣ್ಣ ಅವರು ಮಾತನಾಡಿ ಪರಿಸರದಲ್ಲಿ ಗಿಡ ಮರಗಳನ್ನು ಬೆಳೆಸಿ ಪ್ರತಿಯೊಂದು ಶಾಲೆಯಲ್ಲಿ ಉತ್ತಮವಾದ ಉದ್ಯಾನ ಮಾಡಬೇಕು. ಪರಿಸರದ ಬಗ್ಗೆ ವಿದ್ಯಾರ್ಥಿಗಳು ವಿಶೇಷ ಕಾಳಜಿ ವಹಿಸಬೇಕು ಎಂದು ಸಲಹೆ ಮಾಡಿದರು.ಜಿಲ್ಲಾ ಬುಡಕಟ್ಟು ಕಲ್ಯಾಣಾಧಿಕಾರಿ ಹಾಗೂ ತಾಲ್ಲೂಕು ಕಲ್ಯಾಣಾಧಿಕಾರಿ ಅವರ ಮಾರ್ಗದರ್ಶನದಂತೆ ಶಾಲೆಯಲ್ಲಿ ಉತ್ತಮ ಕೈತೋಟ ಮಾಡಬೇಕು. ಇದಕ್ಕಾಗಿ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಶ್ರಮ ವಹಿಸಬೇಕು ಎಂದು ಮುಖ್ಯ ಶಿಕ್ಷಕರಾದ ಸೋಮಣ್ಣ ಅವರು ತಿಳಿಸಿದರು.ಶಾಲಾ ಶಿಕ್ಷಕರಾದ ಸುವರ್ಣಮ್ಮ, ಪ್ರಭುಸ್ವಾಮಿ, ಶ್ವೇತ ಮತ್ತು ಭೂಮಿಕಾ, ಸಿಬ್ಬಂದಿ ಮಹದೇವ, ಕಾರಯ್ಯ, ಮಹದೇವಮ್ಮ, ಕಲಾವತಿ ಅವರು ಕಾರ್ಯಕ್ರಮದಲ್ಲಿ ಇದ್ದರು.



