ದೇವನಹಳ್ಳಿ: 2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸ್ವೀಪ್ಸಮಿತಿ ವತಿಯಿಂದ ಹಾಗೂ ದೊಡ್ಡಬಳ್ಳಾಪುರ ನಗರಸಭೆಯ ಸಹಯೋಗದೊಂದಿಗೆ 2024 ರ ಲೋಕಸಭಾ ಚುನಾವಣೆ ಅಂಗವಾಗಿ ನಗರಸಭೆಯ ಅವರಣದಲ್ಲಿ ಜಾಗೃತಿ ಜಾಥಾಗೆ ಪೌರಾಯುಕ್ತ ಪರಮೇಶ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ನಗರಸಭೆ ಕಾರ್ಯಾಲಯದಿಂದ ಹೊರಟು ನಗರದ ವಿವಿಧ ರಸ್ತೆಯಲ್ಲಿ ಜಾಥಾ ನಡೆಸಿದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು, ನಾಗರಿಕರು *ನನ್ನ ನಡೆ-ಮತಗಟ್ಟೆ ಕಡೆ* ಹಾಗೂ ‘ *ಚುನಾವಣೆ ಪರ್ವ- ದೇಶದ ಗರ್ವ* ಘೋಷಣೆಗಳನ್ನು ಮೂಳಗಿಸಿದರು. ಬಳಿಕ ಕೋರ್ಟ್ ರಸ್ತೆಯಲ್ಲಿರುವ ಕಲ್ಯಾಣಿ ಬಳಿ ಮಾನವ ಸರಪಳಿ ನಿರ್ಮಿಸಿ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು.
ಮತದಾನ ಜಾಗೃತಿ ಜಾಥಾದಲ್ಲಿ ಕಂದಾಯಾಧಿಕಾರಿ ಗೋವಿಂದರಾಜ್ ಪ್ರತಿಜ್ಞಾವಿಧಿ ಬೋದಿಸಿದರು.ಈ ಸಮಯದಲ್ಲಿ ಕಂದಾಯ ಅಧಿಕಾರಿ ಶಿವಶಂಕರ್ ನಲ್ಮ್ ಮೀನಾ, ಆರೋಗ್ಯ ಶಾಖೆಯ ಕಾಂತರಾಜು, ಸುಧಾ ನಗರಸಭಾ ಸಿಬ್ಬಂದಿ, ಪೌರಕಾರ್ಮಿಕರು ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು.