ಬೆಂಗಳೂರು : ರಾಜ್ಯದಲ್ಲಿ ಜಾತಿ ಗಣತಿಯ ಜ್ವಾಲೆ ಜೋರಾಗಿದೆ. ವಿರೋಧಕ್ಕೆ ಜಗ್ಗದ ಸಿಎಂ ಸಿದ್ದರಾಮಯ್ಯ ಪಟ್ಟು ಬಿಡಲಿಲ್ಲ. ಹೈಕಮಾಂಡ್ ಮನವೊಲಿಕೆ ಮಾಡಿ ರಾಜ್ಯದಲ್ಲಿ ನಿಗದಿಯಂತೆ ಜಾತಿಗಣತಿ ನಡೆಸುವ ನಿರ್ಧಾರ ಮಾಡಿದ್ದಾರೆ. ಸೆಪ್ಟೆಂಬರ್ ೨೨ರಿಂದ ಸಮೀಕ್ಷೆ ಶುರುವಾಗಲಿದೆ. ಈ ವಿಚಾರವಾಗಿ ಒಕ್ಕಲಿಗ ಸಮುದಾಯದ ಎಲ್ಲಾ ಪಕ್ಷಗಳ ನಾಯಕರು ಇಂದು ಮಹತ್ವದ ಸಭೆ ನಡೆಸಿದ್ದಾರೆ.
ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠದಲ್ಲಿ ಒಕ್ಕಲಿಗ ಸಮಾಜದ ಶ್ರೀಗಳಾದ ನಿರ್ಮಾಲನಂದನಾಥ ಹಾಗೂ ನಂಜವಧೂತ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ಆರಂಭವಾಗಿದೆ.
ಸೆಪ್ಟೆಂಬರ್ ೨೨ ರ ಸೋಮವಾರದಿಂದ ರಾಜ್ಯದಲ್ಲಿ ಪ್ರಾರಂಭವಾಗಲಿರುವ ಸಾಮಾಜಿಕ-ಆರ್ಥಿಕ ಸಮೀಕ್ಷೆಯ ಕುರಿತು ಚರ್ಚೆ ನಡೆಸಲಾಗಿದ್ದು, ಸಭೆಯಲ್ಲಿ ಒಕ್ಕಲಿಗರ ಸಭೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪರಿಷತ್ ಸದಸ್ಯ ಸಿಟಿ ರವಿ, ಶಾಸಕ ಜಿಟಿ ದೇವೇಗೌಡ, ಸಂಸದ ಡಾ ಕೆ ಸುಧಾಕರ್, ಅಶ್ವಥ್ ನಾರಾಯಣ್ ಸೇರಿದಂತೆ ಒಕ್ಕಲಿಗ ನಾಯಕರು ಉಪಸ್ಥಿತರಿದ್ದರು.
ಬದ್ಧ ವೈರಿಗಳಂತೆ ಸದಾ ಒಬ್ಬರ ಮೇಲೊಬ್ಬರು ಕೆಂಡಕಾರುವ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸ್ವಾಮೀಜಿ ಅಕ್ಕ-ಪಕ್ಕದಲ್ಲೇ ಸಭೆಗೆ ಹಾಜರಾಗಿದ್ದಾರೆ.