ಬೆಂಗಳೂರು:ನಗರದ ಪಶ್ಚಿಮ ವಿಭಾಗದ ಪೊಲೀಸರು ಡ್ರಗ್ಸ್ ವಿರುದ್ದ ಜಾಗೃತಿ ಮೂಡಿಸಲು ಇಂದು ವಾಕಥಾನ್ ನಡೆಸಿದರು.
ನಾಗರಭಾವಿ ಸರ್ಕಲ್ ನಿಂದ ಜ್ಞಾನಭಾರತಿಪೊಲೀಸ್ ಠಾಣೆವರೆಗೂ ವಾಕಥಾನ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ.
ವಿಶೇಷವೆಂದರೆ ವಾಕಾಥಾನ್ನಲ್ಲಿ ನಟ ಗಣೇಶ್ ಕೂಡ ಭಾಗಿಯಾಗಿದ್ದರು. ನೋ ಡ್ರಗ್ಸ್ ಎಂದು ಹೇಳುವ ಮೂಲಕ ನಟ ಗಣೇಶ್ ಪೊಲೀಸರಿಗೆ ಸಾಥ್ ಕೊಟ್ಟಿದ್ದಾರೆ.
ವಾಕಾಥಾನ್ನಲ್ಲಿ ನೂರಾರು ಎನ್ಎಸ್ಎಸ್ ಹಾಗೂ ಎನ್ಸಿಸಿ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್, ಎಸಿಪಿಗಳಾದ ಚಂದನ್, ಭರತ್ ರೆಡ್ಡಿ ಹಾಗೂ ಪಶ್ಚಿಮ ವಿಭಾಗದ ಇನ್ಸ್ ಪೆಕ್ಟರ್ ಗಳು ಭಾಗಿಯಾಗಿದ್ದರು.