ಬೆಂಗಳೂರು: ಇಎಸ್ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ರಾಜಾಜಿನಗರ ಆವರಣದಲ್ಲಿ ಸಮುದಾಯ ವೈದ್ಯಕೀಯ ವಿಭಾಗದಿಂದ ಇAಡಿಯನ್ ಅಸೋಸಿಯೇಶನ್ ಆಫ್
ಪ್ರಿವೆಂಟಿವ್ ಅಂಡ್ ಸೋಶಿಯಲ್ ಮೆಡಿಸಿನ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಹಯೋಗದಲ್ಲಿ `ಒನ್ ವರ್ಲ್್ಡ, ಒನ್ ಹೆಲ್ತ್ ‘ ಮಾನವ, ಪ್ರಾಣಿ ಮತ್ತು ಪರಿಸರ
ಕ್ಷೇಮಕ್ಕಾಗಿ ಏಕತೆ’ ಎಂಬ ವಿಷಯಾಧಾರಿತ ಜಾಗೃತಿ ವಾಕ್ಥಾನ್ ಆಯೋಜಿಸಲಾಯಿತು. ಕಾರ್ಯಕ್ರಮವನ್ನು , ಅಕಾಡೆಮಿಕ್ ರಿಜಿಸ್ಟಾçರ್ ಡಾ. ಸುಚಿತ್ರಾ ಉದ್ಘಾಟಿಸಿದರು.
ಉಪ ವೈದ್ಯಕೀಯ ಮೇಲ್ವಿಚಾರಕರಾದ ಡಾ. ಶಾಂತಿನಿ ಕೆ, ಮತ್ತು ಡಾ. ಸುರೇಶ್ ಕೆ. ಕುಂಭಾರ, ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಈ ವಾಕ್ಥಾನ್ನ ಉದ್ದೇಶ ಮಾನವ, ಪ್ರಾಣಿ ಹಾಗೂ ಪರಿಸರ ಆರೋಗ್ಯಗಳ ಪರಸ್ಪರ ಅವಲಂಬನೆ ಕುರಿತು ಜಾಗೃತಿ ಮೂಡಿಸುವುದು ಮತ್ತು ಸಮಗ್ರ ಆರೋಗ್ಯದ ಮಹತ್ವವನ್ನು ತಿಳಿಸುವುದಾಗಿತ್ತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಶಿಕ್ಷಕ ವರ್ಗ, ವೈದ್ಯಕೀಯ ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಉತ್ಸಾಹದಿಂದ ಭಾಗವಹಿಸಿದರು.



