This is the title of the web page
This is the title of the web page

ಬಿಜೆಪಿ ತೊರೆಯಲು ಆಯನೂರು ನಿರ್ಧಾರ

ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯತ್ವಕ್ಕೆ ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ರಾಜೀನಾಮೆ ಸಲ್ಲಿಸುವುದಾಗಿ ಪ್ರಕಟಿಸಿದ್ದಾರೆ. ಇಂದು ಹುಬ್ಬಳ್ಳಿಗೆ ತೆರಳಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.

ಈ ಹಿಂದೆ ತಿಳಿಸಿದಂತೆಯೇ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಪದವೀಧರರು, ನೌಕರರು, ಕಾರ್ಮಿಕರ ಹಿತರಕ್ಷಣೆಗಾಗಿ ವಿಧಾನ ಸಭೆ ಪ್ರವೇಶ ಬಯಸಿದ್ದೇನೆ ಎಂದರು. ನಾಳೆ ನಾಮಪತ್ರ ಸಲ್ಲಿಸುವುದಾಗಿ ಹೇಳಿದ ಅವರು, ನಗರದ ಜನರ ಶಾಂತಿಯುತ ಬದುಕಿಗೆ ಅವಕಾಶ ಕಲ್ಪಿಸುವ ಉದ್ದೇಶ ಕೂಡ ನನ್ನದು ಎಂದರು.

ಫ್ಲೆಕ್ಸ್ ನಲ್ಲಿ ಹೇಳಿದಂತೆ ಹರಕು ಬಾಯಿ ಹೊಲಿದು ಒಡೆದ ಮನಸ್ಸುಗಳನ್ನು ಒಗ್ಗೂಡಿಸುವ ನನ್ನ ಪ್ರಯತ್ನಕ್ಕೆ ಈಗಾಗಲೇ ಸ್ವಲ್ಪ ಮಟ್ಟಿಗೆ ಫಲ ದೊರೆತಿದೆ. ಅಶಾಂತ ನಗರ ಎಂಬ ಅಪಖ್ಯಾತಿ ಯಿಂದ ಶಿವಮೊಗ್ಗವನ್ನು ಮುಕ್ತವಾಗಿಸಲು ನಾನು ಬದ್ಧ.
ಆ ಮೂಲಕ ನಗರಕ್ಕೆ ಉದ್ಯಮಗಳು ಬರುವಂತೆ ಮಾಡಿ ಉದ್ಯೋಗಾವಕಾಶ ಕಲ್ಪಿಸಬಯಸಿದ್ದೇನೆ.

ಕುಬೇರರು ಮತ್ತು ಬಲಾಢ್ಯರ ಎದುರು ಸ್ಪರ್ಧೆ ಮಾಡುತ್ತಿದ್ದು ನಗರದ ಜನತೆ ನನ್ನ ಬೆಂಬಲಿಸಲು ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು. ತೆನೆ ಹೊರುತ್ತೇನೊ ಇಲ್ಲವೋ ಎಂಬ ಬಗ್ಗೆ ಕೆಲ ನಾಯಕರ ಜೊತೆ ಮಾತಾಡಿ ನಿರ್ಧರಿಸುತ್ತೇನೆ. ಅದು ರಾಜ್ಯದ ರಾಜಕೀಯ ಪಕ್ಷದ ನಾಯಕರೊಂದಿಗೆ ಎನ್ನುವ ಮೂಲಕ ಜೆಡಿಎಸ್ ಸೇರುವ ಪರೋಕ್ಷ ಸುಳಿವು ನೀಡಿದರು.