ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2023 ರ ಡಿಸೆಂಬರ್ 30 ರಂದು ಹೊಸ ಮತ್ತು ಬಹು ನಿರೀಕ್ಷಿತ ಅಯೋಧ್ಯೆ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ.
ವಿಮಾನ ನಿಲ್ದಾಣದ ಜೊತೆಗೆ, ಪಿಎಂ ಮೋದಿ ಅವರು ನಗರದ ಪುನರಾಭಿವೃದ್ಧಿ ಮಾಡಿದ ಅಯೋಧ್ಯೆ ಧಾಮ್ ರೈಲ್ವೆ ನಿಲ್ದಾಣವನ್ನು ಉದ್ಘಾಟಿಸಲಿದ್ದು, ಅಲ್ಲಿ ಅವರು ಮೊದಲ ಅಮೃತ್ ಭಾರತ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.
ಪ್ರಧಾನಿ ಕಚೇರಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಪಿಎಂ ಮೋದಿ ಮೊದಲು ನವೀಕರಿಸಿದ ರೈಲ್ವೆ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿಯವರು ಹೊಸ ವಂದೇ ಭಾರತ್ ರೈಲುಗಳು ಮತ್ತು ಭಾರತದ ಮೊದಲ ಅಮೃತ್ ಭಾರತ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.
ಅಮೃತ್ ಭಾರತ್ ಎಕ್ಸ್ಪ್ರೆಸ್ ಭಾರತದ ಸೂಪರ್ ಫಾಸ್ಟ್ ಪ್ಯಾಸೆಂಜರ್ ರೈಲುಗಳ ಹೊಸ ವರ್ಗವಾಗಿದೆ. ಅಮೃತ್ ಭಾರತ್ ರೈಲು “ಹವಾನಿಯಂತ್ರಿತವಲ್ಲದ ಬೋಗಿಗಳನ್ನು ಹೊಂದಿರುವ ಎಲ್ಎಚ್ಬಿ ಪುಶ್-ಪುಲ್ ರೈಲು” ಎಂದು ಪಿಎಂಒ ಬಹಿರಂಗಪಡಿಸಿದೆ.