ಚನ್ನರಾಯಪಟ್ಟಣ: ಅಯೋಧ್ಯ ರಾಮ ಮಂದಿರದ ಮಂತ್ರಾಕ್ಷತೆ ದೇವನಹಳ್ಳಿ ತಾಲೂಕು, ಚನ್ನರಾಯಪಟ್ಟಣದಿಂದ ನಲ್ಲೂರು
ಮಾರ್ಗವಾಗಿ ಬೂದಿಗೆರೆ ಗ್ರಾಮದ ಗಣಪತಿ ದೇವಾಲಯ ದಲ್ಲಿ ಕಳಶಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು ಬೂದಿಗೆರೆ ಗ್ರಾಮದ ಪ್ರಮುಖ ರಸ್ತೆಯಲ್ಲಿ ಪದ್ಯಗಳೊಂದಿಗೆ ಪೂಜೆ ಸಲ್ಲಿಸಿ ಶ್ರೀರಾಮುರ ದೇವಾಲಯದಲ್ಲಿ ಭಕ್ತಾದಿಗಳಿಂದ ಭಜನೆ ನೆರವೇರಿಸಲಾಯಿತು.
ಮುಖಂಡ ನಾರಾಯಣಸ್ವಾಮಿ ಮಾತನಾಡಿ ಶ್ರೀರಾಮ ಸೇನೆಯ ನಮ್ಮ ಗ್ರಾಮದ ಯುವಕರು ಹೆಚ್ಚಿನ ರೀತಿಯಲ್ಲಿ ಪಾಲ್ಗೊಂಡು ಶ್ರೀರಾಮ ಘೋಷಣೆಗಳನ್ನು ಕೂಗುತ್ತಾ ರಾಮ ಮಂದಿರ ಉದ್ಘಾಟನೆ ಆಗುವುದು ಎಲ್ಲರಿಗೂ ಸಂತಸ ತಂದಿದೆ ಎಂದರು. ಈ ಸಂದರ್ಭದಲ್ಲಿ ಬುದಿಗೆರೆ ಗ್ರಾಮದ ಶ್ರೀರಾಮ ಭಕ್ತರು ಗ್ರಾಮಸ್ಥರು ಹಾಜರಿದ್ದರು.