ಹೊಸಕೋಟೆ: ನಗರದ ತಮ್ಮೇಗೌಡ ಬಡಾವಣೆಯ ವಿನಾಯಕ ದೇವ ಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆಯನ್ನು ಪ್ರತಿ ಹಿಂದೂಗಳ ಮನೆಗೆ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಪ್ರತಿಯೊಬ್ಬರು ಅಂದು ಮನೆಗಳಲ್ಲಿಯೂ ಸಹ ವಿಶೇಷ ಪೂಜೆ ಸಲ್ಲಿಸಿ ಹಿರಿಯರು ತಮ್ಮ ಮಕ್ಕಳಿಗೆ ಹಾಗೂ ಕುಟುಂಬದ ಸದಸ್ಯರಿಗೆ ಈ ಮಂತ್ರಾಕ್ಷತೆಯನ್ನು ಹಾಕಿ ಆಶೀರ್ವದಿಸಬೇಕು. ಇದೇ ರೀತಿ ಸಂಜೆ ಮನೆಗಳ ಮುಂದೆ ದೀಪಗಳನ್ನು ಬೆಳಗಿಸಬೇಕು ಎಂದು ಬಿ.ರವಿ ವಿವರಿಸಿದರು.
ಮಂತ್ರಾಕ್ಷತೆಯನ್ನು ಸೂಚಿಸಿರುವ ನಿಯಮ ಗಳನ್ನು ಪಾಲಿಸುವ ಮೂಲಕ ಸಾಂಪ್ರದಾಯಿಕ ಉಡುಗೆಗಳಲ್ಲಿ ತೆರಳಿ ವಾರ್ಡ್ ವ್ಯಾಪ್ತಿಯ ಎಲ್ಲಾ ಮನೆಗಳ ಹಿರಿಯರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.ನಗರಸಭೆ ಸದಸ್ಯ ಬಿ.ಬಸವ ರಾಜ್, ಸಿ.ಜಯರಾಜ್, ಉಮೇಶ್,
ಸುನಿಲ್, ರಾಜೇಶ್, ವಿಜಯ ಕುಮಾರ್, ರವಿ ಕಬಾಬ್, ತಮ್ಮೇಗೌಡಬಡಾವಣೆಯ ನಿವಾಸಿಗಳು ಭಾಗವಹಿಸಿದ್ದರು.