ದೇವನಹಳ್ಳಿ: ಪಟ್ಟಣದ ಪುರಸಭೆಯಲ್ಲಿ ಆಯುಧಪೂಜಾ ಮತ್ತು ಪೌರಕಾರ್ಮಿಕ ದಿನಾಚರಣೆ ಸಂಭ್ರಮದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಪೂರೈಕೆ ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ದೇವನಹಳ್ಳಿಯ ಕೆರೆ ಅಭಿವೃದ್ಧಿಗೆ 9 .50ಕೋಟಿ ಅನುದಾನ ಬಿಡುಗಡೆ, 20 .ಕೋಟಿ ರಾಷ್ಟ್ರೀಯ ಹೆದ್ದಾರಿ 140 .ಕೋಟಿ ವೆಚ್ಚದಲ್ಲಿ ದೇವನಹಳ್ಳಿ ಮತ್ತು ವಿಜಯಪುರ ಪುರಸಭೆಯ ಎಲ್ಲಾ ದಾರಿಗಳನ್ನು ಕಾಂಕ್ರೀಟ್ ರಸ್ತೆ ಮಾಡಸುವ ಗುರಿ ಇದೆ. 50 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಹಾಗೂ ದೇವನಹಳ್ಳಿ ಬೆಂಗಳೂರಿನ ಉಪನಗರವಾಗುವುದರಿಂದ ಖಾಸಗಿ ಲೇಔಟ್ ನಲ್ಲಿ ರಸ್ತೆಗಳು ಮತ್ತು ಆಟದ ಮೈದಾನ ಬೈಯಪಾ ಕಡೆಯಿಂದ ಮಾಡಿಸಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರಕ್ಕೆ ತಾವುಗಳು ಮಂಡಿಸಿರುವ ಮನವಿ ಸಲ್ಲಿಸಿ ಪ್ರಯತ್ನ ಮಾಡಲಾಗುವುದು ಹುಸಿ ಭರವಸೆಗಳನ್ನು ನೀಡಲಾರೆ ಎಂದು ತಿಳಿಸಿದರು.ದೇವನಹಳ್ಳಿ ಐತಿಹಾಸಿಕ ಸ್ಥಳವಾಗಿರುವುದ ರಿಂದ ಕೋಟೆಯ ಅಭಿವೃದ್ಧಿ ಮತ್ತು ಸಿಹಿನೀರಿನ ಸರೋವರ ದಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಿ ಪ್ರವೋಸೋದ್ಯಮಕ್ಕೆ ಪ್ರೋತ್ಸಾಹ ನೀಡಬೇಕು, ದೇವನಹಳ್ಳಿ ನಗರಕ್ಕೆ ಮೆಟ್ರೋ ವ್ಯವಸ್ಥೆ ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ದೇವನಹಳ್ಳಿ ಪುರಸಭೆಯಲ್ಲಿ ಆಯುಧ ಪೂಜೆ ಮಾಡಿ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಪುರಸಭೆಯ ಆಡಳಿತಾಧಿಕಾರಿ ದೊಡ್ಡಮಲವಯ್ಯ, ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಮತ್ತು ಕೆಪಿಸಿಸಿ ಸದಸ್ಯರು ಸಿ.ಜಗನ್ನಾಥ್, ಕೆಪಿಸಿಸಿ ಸದಸ್ಯರು ಚಿನ್ನಪ್ಪ, ಮಖಂಡರುಗಳಾದ ಗುಟ್ಟಹಳ್ಳಿರವೀಂದ್ರ, ನಿಲೇರಿಮಂಜುನಾಥ್, ಮನು ಕೃಷ್ಣ, ಗಾರೆ ರವಿ ಕುಮಾರ್, ಚಂದ್ರಣ್ಣ, ಡಿ.ಎನ್ ವೆಂಕಟೇಶ್, ಗೀತಾ ಶ್ರೀಧರ್, ಲಕ್ಷ್ಮೀಅಂಬರೀಶ್, ಪುಷ್ಪ ಲಕ್ಷ್ಮೀ ನಾರಾಯಣ್, ಬಾಂಬೆ ನಾರಾಯಣಸ್ವಾಮಿ, ಕೋಡಿ ಮಂಚೇನಹಳ್ಳಿ ನಾಗೇಶ್, ಚಿಂತಾಮಣಿ ಶ್ರೀನಿವಾಸ್, ಎಂ.ಮೂರ್ತಿ, ವೆಂಕಟೇಶ್ ಸೇರಿದಂತೆ ಪುರಸಭಾ ಸಿಬ್ಬಂದಿ ವರ್ಗ ಮತ್ತು ಪೌರಕಾರ್ಮಿಕರು ಭಾಗವಹಿಸಿದ್ದರು.