ಬೆಂಗಳೂರು: ಅಬಕಾರಿ ಇಲಾಖೆಯಿಂದ ಸುಂಕ ಇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೇಂದ್ರ ಸರ್ಕಾರದ ನಡೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂಬಂಧ ಟ್ವಿಟ್ ಮಾಡಿರುವ ಅವರು, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿAದಾಗಿ, ಕೇವಲ ಒಂದು ತಿಂಗಳಲ್ಲಿ ಕಚ್ಚಾ ತೈಲದ ಬೆಲೆಗಳು ಬ್ಯಾರೆಲ್ಗೆ 70 ಡಾಲರ್ ರಿಂದ 122 ಡಾಲರ್ ಗೆ ಏರಿಕೆ ಕಂಡಿದೆ. ಉತ್ತರ ಅಮೆರಿಕಾ ಮತ್ತು ಯುರೋಪಿನ ಅಭಿವೃದ್ಧಿ ಹೊಂದಿದ ದೇಶಗಳೂ ಸೇರಿದಂತೆ ವಿಶ್ವಾದ್ಯಂತ ಬಹುತೇಕ ದೇಶಗಳು ಇಂಧನ ಬೆಲೆಯಲ್ಲಿ 30-50% ಹೆಚ್ಚಳ ಮಾಡಿ, ನಾಗರಿಕರ ಮೇಲೆ ಬೆಲೆ ಹೆಚ್ಚಳದ ಹೊರೆಯನ್ನು ವರ್ಗಾಯಿಸಿವೆ.ಆದರೆ ಭಾರತದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅವರು, ಜಾಗತಿಕ ಬಿಕ್ಕಟ್ಟಿನ ಈ ಪರಿಸ್ಥಿತಿಯಲ್ಲಿ ಕೂಡ, ತಮ್ಮ ಜನಪರ ನಾಯಕತ್ವವನ್ನು ಪ್ರದರ್ಶಿಸಿದ್ದಾರೆ. ಬಹುತೇಕ ದೇಶಗಳು ಮಾಡಿದಂತೆ ಸಾಮಾನ್ಯ ಜನರ ಮೇಲೆ ಅಧಿಕ ಹೊರೆ ಹಾಕುವ ಬದಲು ನಮ್ಮ ಓಆಂ ಸರ್ಕಾರ, ತನ್ನ ಹಣಕಾಸಿನ ಮೇಲೆ ನೇರ ಹೊಡೆತದ ಹೊರತಾಗಿಯೂ ಪರಿಸ್ಥಿತಿಯನ್ನು, ತನ್ನ ದಿಟ್ಟ ನೀತಿ, ನಿರ್ಣಯ, ನಿಲುವುಗಳಿಂದ ನಿಭಾಯಿಸುತ್ತಿದೆ.
ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 13 ರೂ.ಗಳಿಂದ 3 ರೂ ಪ್ರತಿ ಲೀಟರ್ಗೆ ಇಳಿಸಲಾಗಿದೆ. ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಗೆ 10 ರೂ ನಿಂದ ಶೂನ್ಯಕ್ಕೆ ಇಳಿಸಲಾಗಿದೆ. ತೈಲ ಕಂಪನಿಗಳು ಈಗಾಗಲೇ ಪೆಟ್ರೋಲ್ ಮೇಲೆ 24 ರೂ ಪ್ರತಿ ಲೀಟರ್ ಮತ್ತು ಡೀಸೆಲ್ ಮೇಲೆ 30 ರೂ ಪ್ರತಿ ಲೀಟರ್ ಗೆ ನಷ್ಟವನ್ನು ಭರಿಸುತ್ತಿವೆ. ಭಾರತ ಸರ್ಕಾರ ಆ ಹೊರೆಯನ್ನು ತನ್ನದೇ ಆದ ತೆರಿಗೆ ಆದಾಯದ ವೆಚ್ಚಗಳ ಮೂಲಕ ಕಡಿಮೆ ಮಾಡುತ್ತಿದೆ. ಭಾರತದ ಗ್ರಾಹಕರು ಸಂಕಷ್ಟ ಎದುರಿಸುತ್ತಿರುವಾಗ ಸಂಸ್ಕರಣಾಗಾರಗಳು ವಿದೇಶದಲ್ಲಿ ಮಾರಾಟ ಮಾಡಿ ಲಾಭ ಗಳಿಸಲು ಸಾಧ್ಯವಾಗದಂತೆ, ರಫ್ತು ತೆರಿಗೆಯನ್ನು ಕೂಡ ವಿಧಿಸಲಾಗಿದೆ.4 ವರ್ಷಗಳ ಹಿಂದೆ ರಷ್ಯಾ-ಉಕ್ರೇನ್ ಸಂಘರ್ಷ ಪ್ರಾರಂಭವಾದಾಗಿನಿಂದ, ಓಆಂ ಸರ್ಕಾರ, ಜಾಗತಿಕ ಪ್ರತಿಕೂಲ ಪರಿಸ್ಥಿತಿಗಳು ಭಾರತೀಯ ನಾಗರಿಕರ ಮೇಲೆ ಋಣಾತ್ಮಕ ಪರಿಣಾಮ ಬೀರದಂತೆ ನಿರಂತರವಾಗಿ ನೋಡಿಕೊಳ್ಳುತ್ತಿದೆ. ಹೊರಗಿನ ಸಮರದ ಕಾವು ನಮ್ಮ ಅಡುಗೆಮನೆ ತಲುಪದಂತೆ ನಿಗಾ ವಹಿಸಿದೆ.ಈ ದಿಟ್ಟ, ಸಕಾಲಿಕ ಮತ್ತು ಜನಪರ ನಿರ್ಧಾರಕ್ಕಾಗಿ ಆದರಣೀಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ, ಸನ್ಮಾನ್ಯ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಜೀ ಮತ್ತು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಸನ್ಮಾನ್ಯ ಶ್ರೀ ಹರ್ದೀಪ್ ಸಿಂಗ್ ಪುರಿ ಜೀ ಅವರಿಗೆ ಸಮಸ್ತ ನಾಗರಿಕರ ಪರವಾಗಿ ಆದರಪೂರ್ವಕ ಕೃತಜ್ಞತೆಗಳು ಎಂದಿದ್ದಾರೆ.
ಕೇಂದ್ರ ಸರ್ಕಾರದ ನಡೆಗೆ ಬಿ.ವೈ. ವಿಜಯೇಂದ್ರ ಅಭಿನಂದನೆ



