This is the title of the web page
This is the title of the web page

ಶತಕ ಸಿಡಿಸಿ ವಿರಾಟ್-ರೋಹಿತ್ ದಾಖಲೆ ಮುರಿದ ಬಾಬರ್

ಲಾಹೋರ್: ನ್ಯೂಜಿಲೆಂಡ್ ವಿರುದ್ಧ ನಡೆದ 2ನೇ ಟಿ 20 ಪಂದ್ಯಗಳಲ್ಲಿ ಭರ್ಜರಿ ಶತಕ ಸಿಡಿಸಿದ ಪಾಕ್ ನಾಯಕ ಬಾಬರ್ ಆಜಂ ( 58 ಎಸೆತ, 101 ರನ್) ಭಾರತದ ತಂಡದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿದ್ದ ಮಹತ್ತರ ದಾಖಲೆಯನ್ನು ಮುರಿದಿದ್ದಾರೆ.

ಬಾಬರ್ ಆಜಂ ನಾಯಕನಾಗಿ 3 ಶತಕಗಳನ್ನು ಸಿಡಿಸುವ ಮೂಲಕ ರೋಹಿತ್ ಶರ್ಮಾರ ದಾಖಲೆ ಮುರಿದಿದ್ದಾರೆ. ರೋಹಿತ್ ನಾಯಕನಾಗಿ 2 ಟಿ 20 ಶತಕ ಹಾಗೂ ಒಟ್ಟಾರೆ 4 ಶತಕಗಳನ್ನು ಸಿಡಿಸಿದ್ದಾರೆ.

ದೇಶಿಯ ಕ್ರಿಕೆಟ್ ಸೇರಿದಂತೆ ಬಾಬರ್ ಆಜಂ ಒಟ್ಟಾರೆ ನಾಯಕನಾಗಿ 6 ಶತಕಗಳನ್ನು ಬಾರಿಸಿದ್ದು, ವಿರಾಟ್ ಅವರ ದಾಖಲೆಯನ್ನು ಮುರಿದಿದ್ದಾರೆ. ಕೊಹ್ಲಿ ಆರ್ಸಿಬಿಯ ನಾಯಕನಾಗಿದ್ದಾಗ 4 ಹಾಗೂ 2022ರ ಏಷ್ಯಾ ಕಪ್ ಟೂರ್ನಿ ಯಲ್ಲಿ ಆಟಗಾರನಾಗಿ ಒಂದು ಶತಕ ಸಿಡಿಸಿದ್ದಾರೆ. ಆಜಂರವರ ಶತಕದಿಂದ ಪಾಕಿಸ್ತಾನ 38 ರನ್‍ಗಳ ಜಯ ದಾಖಲಿಸಿತು.