ಬೆಂಗಳೂರು: ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಲಯನ್ಸ್ ಡಿಸ್ಟ್ರಿಕ್ಟ್ 317ಎಫ್ ನಿಂದ ಸಂಕಷ್ಟದಲ್ಲಿರುವ ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸುವ ಉದ್ದೇಶದಿಂದ 15 ಇ-ಆಟೋ ರಿಕ್ಷಾಗಳನ್ನು ವಿತರಿಸಲಾಯಿತು.
ಬಿಡಬ್ಯು ಎಸ್ ಎಸ್ ಬಿ ಸುವರ್ಣ ಭವನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಫಲಾನುಭವಿಗಳಿಗೆ ಇ-ಆಟೋ ರಿಕ್ಷಾಗಳನ್ನು ಹಸ್ತಾಂತರಿಸಲಾಯಿತು.
ಲಯನ್ಸ್ ಇಂಟರ್ನಾ್ಯಷನಲ್ ಡಿಸ್ಟಿçಕ್ಟ್ 317ಎಫ್, ಜಿಲ್ಲಾ ಗವರ್ನರ್ ಲಯನ್ ಆಕಾಶ್ ಎ. ಸುವರ್ಣ ಅವರ ನೇತೃತ್ವದಲ್ಲಿ, ಮಹಿಳೆಯರಿಗೆ ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಚಾಲನಾ ತರಬೇತಿ ಪಡೆದ ಮಹಿಳಾ ಫಲಾನುಭವಿಗಳನ್ನು ಆಯ್ಕೆ ಮಾಡಿ ಇ-ಆಟೋ ರಿಕ್ಷಾಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಗವರ್ನರ್ ಲಯನ್ ಆಕಾಶ್ ಎ. ಸುವರ್ಣ, ಲಯನ್ಸ್ ಸಂಸ್ಥೆ ದೃಷ್ಟಿ ಸಂರಕ್ಷಣೆ, ಮಧುಮೇಹ ಜಾಗೃತಿ, ರಕ್ತ ಬ್ಯಾಂಕ್ಗಳ ಸ್ಥಾಪನೆ, ನಿರ್ವಹಣೆ, ಹಸಿವು ನಿವಾರಣೆ, ಪರಿಸರ ಸಂರಕ್ಷಣೆ, ಬಾಲ್ಯದಲ್ಲಿ ಬರುವ ಕ್ಯಾನ್ಸರ್ ತಡೆಗಟ್ಟುವ, ಸಂಕಷ್ಟದಲ್ಲಿರುವವರಿಗೆ ಮಾನವೀಯ ನೆರವು ನೀಡುವ ಜೊತೆಗೆ ಯುವ ಸಮೂಹದ ಶ್ರೇಯೋಭಿವೃದ್ಧಿಗೆ ಲಯನ್ಸ್ ಸಂಸ್ಥೆ ಶ್ರಮಿಸುತ್ತಿದೆ ಎಂದರು. ಲಯನ್ ದೇವತಾ ಬಿ.ಎನ್. ಮತ್ತಿತರರು ಉಪಸ್ಥಿತರಿದ್ದರು.
ಮಹಿಳಾ ದಿನದ ಹಿನ್ನೆಲೆ: ಲಯನ್ಸ್ ಡಿಸ್ಟ್ರಿಕ್ಟ್ 317ಎಫ್ ನಿಂದ ಮಹಿಳೆಯರಿಗೆ 15 ಇ-ಆಟೋ ವಿತರಣೆ



