ನವದೆಹಲಿ: ಭಾರತದ ಜನಪ್ರಿಯ ಮಸಾಲೆ ಬ್ರ್ಯಾಂಡ್ ಆದ `ಎವರೆಸ್ಟ್’ ಈಗ ಆಹಾರ ಸುರಕ್ಷತಾ ಅಧಿಕಾರಿಗಳ ತೀವ್ರ ತಪಾಸಣೆಗೆ ಒಳಪಟ್ಟಿದೆ. ಇತ್ತೀಚೆಗೆ ನಡೆದ ಪ್ರಯೋಗಾಲಯ ಪರೀಕ್ಷೆಗಳಲ್ಲಿ ಕಂಪನಿಯ ಕೆಲವು ಉತ್ಪನ್ನಗಳಲ್ಲಿ ನಿಗದಿಗಿಂತ ಹೆಚ್ಚಿನ ಪ್ರಮಾಣದ ಕೀಟನಾಶಕ ಮತ್ತು ಅಪಾಯಕಾರಿ ಬ್ಯಾಕ್ಟೀರಿಯಾಗಳ ಕುರುಹುಗಳು ಪತ್ತೆಯಾಗಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ.
ಹಲವು ದೇಶಗಳ ಆಹಾರ ನಿಯಂತ್ರಣ ಸಂಸ್ಥೆಗಳು ಎವರೆಸ್ಟ್ ಮಸಾಲೆ ಮಾದರಿಗಳನ್ನು ಪರೀಕ್ಷಿಸಿದಾಗ, ಅದರಲ್ಲಿ ಹಾನಿಕಾರಕ ರಾಸಾಯನಿಕಗಳಿರುವುದು ಕಂಡುಬAದಿದೆ. ಇದರ ಬೆನ್ನಲ್ಲೇ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕೂಡ ದೇಶಾದ್ಯಂತ ಮಸಾಲೆ ಪದಾರ್ಥಗಳ ಗುಣಮಟ್ಟದ ಮೇಲೆ ಕಠಿಣ ನಿಗಾ ವಹಿಸಲು ಸೂಚಿಸಿದೆ.
ಪರೀಕ್ಷೆಯ ವರದಿಯಲ್ಲಿ `ಎಂಟರೊಬ್ಯಾಕ್ಟೀರಿಯಾಸಿ’ ಎಂಬ ಬ್ಯಾಕ್ಟೀರಿಯಾದ ಗುಂಪು ಪತ್ತೆಯಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದರ ಬಗ್ಗೆ ನೀವು ತಿಳಿಯಬೇಕಾದ ಪ್ರಮುಖ ಅಂಶಗಳು ಇಲ್ಲಿವೆ:
ಬ್ಯಾಕ್ಟಿರೀಯಾ ಪತ್ತೆ ಹಿನ್ನೆಲೆ ಎವರೆಸ್ಟ್ ಮಸಾಲೆ ಪದಾರ್ಥಗಳ ಮೇಲೆ ತೀವ್ರ ತಪಾಸಣೆ



