ಮಾಗಡಿ: ಬಗರ್ ಹುಕುಂ ಯೋಜನೆಯಡಿಯಲ್ಲಿ ಸಾಕಷ್ಟು ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ಉಳುಮೆದಾರರಿಗೆ ನ್ಯಾಯ ಒದಗಿಸಲು ನಾವು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ನೂತನ ಬಗರ್ ಹುಕುಂ ಕಮಿಟಿ ಸದಸ್ಯ ಆಗ್ರೋ ಪುರುಷೋತ್ತಮ್ ಹೇಳಿದರು.
ಪಟ್ಟಣದಲ್ಲಿ ಈ ಕುರಿತು ಮಾತನಾಡಿದ ಅವರು ಶಾಸಕರಾದ ಹೆಚ್.ಸಿ.ಬಾಲಕೃಷ್ಣ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ನನ್ನ ಹೋರಾಟವನ್ನು ಗುರುತಿಸಿ ಬಗರ್ ಹುಕುಂ ಕಮಿಟಿ ಸದಸ್ಯನನ್ನಾಗಿ ನೇಮಕ ಮಾಡಿರುವುದಕ್ಕೆ ವೈಯಕ್ತಿಕವಾಗಿ ಧನ್ಯವಾದ ಅರ್ಪಿಸುತ್ತೇನೆ.
ಇದು ಒಂದು ಜವಾಬ್ದಾರಿಯುತ ಸ್ಥಾನವಾಗಿದ್ದು ಇದನ್ನು ನಿಭಾಯಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.ಮಾಗಡಿ ತಾಲ್ಲೂಕಿನಲ್ಲಿ ಅನೇಕ ವರ್ಷಗಳಿಂದ ಸಾವಿರಾರು ರೈತರು ಬಗರ್ ಹುಕುಂ ಯೋಜನೆಯ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ.ಯಾರು ಅರ್ಹ ಫಲಾನುಭವಿಗಳು ಅಂತಹವರಿಗೆ ನ್ಯಾಯ ಒದಗಿಸಲಾಗುವುದು.ಕಮಿಟಿ ಸದಸ್ಯರಾದ ಗೆಜ್ಜಗಾರಗುಪ್ಪೆ ಕುಮಾರ್,ಚಂದ್ರಕಲಾ ತಹಶೀಲ್ದಾರರು ವಿ.ಎ.ಆರ್.ಐ.ಎಲ್ಲರೂ ಸ್ಥಳಕ್ಕೆ ಭೇಟಿನೀಡಿ ಸ್ಥಳ ಪರಿಶೀಲಿಸಿ ನ್ಯಾಯಯುತವಾಗಿ ಕೊಡಮಾಡುವ ರೈತರಿಗೆ ನಾವೇ ಪೋಡಿ,ದುರಸ್ತಿ,ಖಾತೆ ಮಾಡಿಸಿ ರೈತರಿಗೆ ನಾವೇ ಖುದ್ದಾಗಿ ನೀಡುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯು ಇದಾಗಿದ್ದು ಈ ಹಿಂದೆ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರು ಈ ಯೋಜನೆಗೆ ಚಾಲನೆ ನೀಡಿದ್ದರು.ಪ್ರಸ್ತುತ ಕಂದಾಯ ಸಚಿವರಾಗಿರುವ ಕೃಷ್ಣ ಭೈರೇಗೌಡರು ಅರ್ಹ ರೈತರಿಗೆ ಅನ್ಯಾಯವಾಗಬಾರದು ಮೋಸವಾಗಬಾರದೆಂದು ಈಗಾಗಲೇ ಡಿಜಟಲೀಕರಣದಮೂಲಕ ಆಪ್ ಬಿಡುಗಡೆ ಮಾಡಿದ್ದು ಇದರಿಂದ ಯಾರು ಅನುಭವದಲ್ಲಿದ್ದಾರೆ ಎಂದು ಗುರುತಿಸಲು ಅನುಕೂಲವಾಲಿದೆ.
ಈಗಾಗಲೇ ಶಾಸಕರು ತಹಶೀಲ್ದಾರರ ಕಚೇರಿಯಲ್ಲಿ ಸಭೆ ನಡೆಸಿದ್ದು ಈ ಸಭೆಯಲ್ಲಿ ಫಾರಂ ನಂಬರ್ 50 ಅರ್ಜಿದಾರರಿಗೆ ಎಲ್ಲವೂ ವಿಲೇವಾರಿಯಾಗಿದ್ದು ಫಾರಂ ನಂಬರ್ 53 ರಲ್ಲಿ 2371 ಅರ್ಜಿದಾರರಿದ್ದು ಅವರಿಗೆ ತಲುಪಬೇಕು ಎಂದು ಮಾಹಿತಿ ತಿಳಿಸಿದ್ದು ಈ ರೈತರ ಜಾಗಕ್ಕೆ ನಾವೇ ಖುದ್ದಾಗಿ ಅಧಿಕಾರಿಗಳ ಜೊತೆಗೂಡಿ ಸ್ಥಳ ಪರಿಶೀಲಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಶಾಸಕರಾದ ಹೆಚ್.ಸಿ.ಬಾಲಕೃಷ್ಣರವರ ಆದೇಶದಂತೆ ಮೊದಲ ಹಂತವಾಗಿ ಕಾನೂನಾತ್ಮಕವಾಗಿ ಯಾವುದೇ ತೊಡಕಿಲ್ಲದ ಫಲಾನುಭವಿಗಳಿಗೆ ಪೋಡಿ, ದುರಸ್ತಿ,ಖಾತೆಯನ್ನು ನಾವೇ ಮಾಡಿಸಿಕೊಡಲು ನಾವು ಬದ್ದರಾಗಿದ್ದೇವೆ ಎಂದು ಪುರುಷೋತ್ತಮ್ ವಿವರಿಸಿದರು.