ನೆಲಮಂಗಲ: ತಾಲ್ಲೂಕು ಸೋಂಪುರ ಹೋಬಳಿಯ ಎಡೇಹಳ್ಳಿ ಗ್ರಾಮದ ಸರ್ವೆ ನಂಬರ್ 97 ರಲ್ಲಿ ಒಂದು ಎಕರೆ 20 ಕುಂಟೆ ಜಮೀನಿನಲ್ಲಿ ರಾಗಿ ಬೆಳೆ ಹಾಕಲಾಗಿತ್ತು. ಸುಮಾರು ದಿನಗಳ ಹಿಂದೆ ಯಾರೋ ಕಿಡಿಗೇಡಿಗಳು ರಾಗಿ ಹೊಲಕ್ಕೆ ಬೆಂಕಿ ಇಕ್ಕಿದರು. ರಾಗಿ ಹೊಲವನ್ನು ಪರಿಶೀಲಿಸಲು ಇಂದು ದಂಡಾಧಿಕಾರಿಗಳು ಜಮೀನಿನ ಮಾಲೀಕರು ಮತ್ತು ಗ್ರಾಮಸ್ಥರ ಅಭಿಪ್ರಾಯ ತಿಳಿಯಲು ಎಡೇಹಳ್ಳಿ ಗ್ರಾಮಕ್ಕೆ ಆಗಮಿಸಿದರು.
ದಂಡಾಧಿಕಾರಿಗಳು ಜಮೀನಿನ ಮಾಲೀಕರು ಮತ್ತು ಸ್ಥಳೀಯರನ್ನು ಹೇಳಿಕೆ ಪಡೆದು ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ನಂತರ ನ್ಯಾಯ ದೊರಕಿಸಿ ಕೊಡುವುದಾಗಿ ತಿಳಿಸಿದರು. ರೈತ ಮಂಜುನಾಥ್ ಮಾತನಾಡಿ ಈ ವರ್ಷ ರಾಗಿ ಬೆಳೆಯನ್ನು ಹಾಕಿದ್ದು ಈ ಜಮೀನು ನ್ಯಾಯಾಂಗದಲ್ಲಿದ್ದು.
ನಾನು ಸುಮಾರು ವರ್ಷಗಳಿಂದ ಈ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದು ಈ ಬಾರಿಯೂ ಕೂಡ ನಾನೇ ಉಳುಮೆ ಮಾಡಿ ರಾಗಿ ಬೆಳೆಯನ್ನು ಹಾಕಿರುತೇನೆ ಆದರೆ ಫಸಲು ಕಟವಿಗೆ ಬಂದ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ ಕಾರಣ ಫಸಲು ನಾಶವಾಗಿದೆ ಇದಕ್ಕೆ ಸಂಬಂಧಪಟ್ಟಂತೆ ನೆಲಮಂಗಲ ದಂಡಾಧಿಕಾರಿಗಳು ನಮ್ಮ ಜಮೀನಿಗೆ ಭೇಟಿ ನೀಡಿ ಫಸಲನ್ನು ವೀಕ್ಷನೆ ಮಾಡಿ ಸ್ಥಳೀಯರ ಹೇಳಿಕೆ ಪಡೆದಿದ್ದಾರೆ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ನನಗೆ ಆಗಿರುವ ನಷ್ಟಕ್ಕೆ ತಕ್ಕ ಪ್ರತಿಫಲವನ್ನು ಒದಗಿಸಿ ಕೊಡುತ್ತಾರೆ ಎಂದು ನಾನು ನಂಬಿದ್ದೇನೆ ಎಂದರು.